

ಕಾರವಾರ: ಮಾಜಾಳಿ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದ 21 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಬುಧವಾರ ಮಾಜಾಳಿ ಕಾಡಿನಲ್ಲಿ ನಾಶಪಡಿಸಲಾಯಿತು. ಒಟ್ಟು 85 ಪ್ರಕರಣಗಳಲ್ಲಿ ಜಪ್ತು ಮಾಡಿದ್ದ 3,320.500 ಲೀಟರ್ ಮದ್ಯ, 3,338.100 ಲೀಟರ್ ಪೆನ್ನಿ ಹಾಗೂ 630.970 ಲೀಟರ್ ಬೀಯರ್ನ್ನು ನಾಶ ಮಾಡಲಾಯಿತು. ತಹಸೀಲ್ದಾರ್ ರಾಮಚಂದ್ರ ಕಟ್ಟಿ, ಅಬಕಾರಿ ಉಪ ಆಯುಕ್ತ ಮೋಹನ್ ಇದ್ದರು.