5ರಂದು ಕಲಬುರಗಿಯಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗೆ ಚಾಲನೆ : ಗೃಹ ಬಳಕೆದಾರರಿಗೆ 200 ಯೂನಿಟ್ ವಿದ್ಯುತ್ ಫ್ರೀ !

IMG-20230803-WA0092
Published on

ಕಾರ್ಯಕ್ರಮ ನಿಮಿತ್ತ ಹಿರಿಯ ಅಧಿಕಾರಿಗಳೊಂದಿಗೆ ಪ್ರಿಯಾಂಕ್ ಸಭೆ | ಲೋಪವಾಗದಂತೆ ಎಚ್ಚರಿಕೆ ವಹಿಸಲು ಸೂಚನೆ

 ವಿಜಯವಾಣಿ ಸುದ್ದಿಜಾಲ  ಕಲಬುರಗಿ
ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ಒದಗಿಸುವ ಗೃಹ ಜ್ಯೋತಿ ಯೋಜನೆ ಚಾಲನೆ ನೀಡುವ ಸಮಾರಂಭ ಆ.5 ರಂದು ನೆಳಗ್ಗೆ 11 ಗಂಟೆಗೆ  ಕಲಬುರಗಿಯಲ್ಲಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಶಿಷ್ಟಾಚಾರ ಪಾಲಿಸಿಕೊಂಡು ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ  ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಗೃಹ ಜ್ಯೋತಿ ಯೋಜನೆ ಉದ್ಘಾಟನಾ ಸಮಾರಂಭ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕಾರ್ಯಕ್ರಮ ಯಶಸ್ಸಿಗೆ ಎಲ್ಲರು ಶ್ರಮಿಸಬೇಕು. ಡಿಸಿಯವರು ವಿವಿಧ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು, ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಿಎಂ ಅವರೊಂದಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್  ಸೇರಿದಂತೆ ಹಲವು ಜಿಲ್ಲೆಗಳ ಸಚಿವರು,ಶಾಸಕರು, ಸಂಸದರು, ಮೇಯರ್, ಜನಪ್ರತಿನಿಧಿಗಳು ಆಗಮಿಸುವ ಕಾರಣ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಅಂಬುಲೆನ್ಸ್, ಅಗ್ನಿಶಾಮಕ ದಳ ಹೀಗೆ ಎಲ್ಲರು ತುರ್ತು ಸೇವೆಗೆ ಸಜ್ಜಾಗಿರಲು ತಾಕೀತು ಮಾಡಿದರು.
ವಿವಿಧ ತಾಲೂಕುಗಳಿಂದ ಸಾರ್ವಜನಿಕರು, ಫಲಾನುಭವಿಗಳು ಆಗಮಿಸುವುದರಿಂದ ಶಾಸಕರ ಕೋರಿಕೆಯಂತೆ ಸಾರಿಗೆ ಸಂಸ್ಥೆಯ ಬಸ್‌ವ್ಯವಸ್ಥೆ ಕಲ್ಪಿಸಬೇಕು. ಎಲ್ಲರಿಗೂ ಆಸನ, ಕುಡಿವ ನೀರು, ಊಟದ ವ್ಯವಸ್ಥೆ ಮಾಡಬೇಕು. ತುರ್ತು  ಸ್ಪಂದಿಸಲು ಅಲ್ಲಲ್ಲಿ ಆರೋಗ್ಯ ಸಿಬ್ಬಂದಿ ತಂಡ ನಿಯೋಜಿಸಬೇಕು. ನಾಲ್ಕು ದಿಕ್ಕಿನಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ  ಮಾಡಲು ಸೂಚಿಸಿದರು.
ಪ್ರವೇಶ ಪಾಸ್ ಮತ್ತು ವಾಹನ ಪಾಸ್ ವ್ಯವಸ್ಥೆ ಮಾಡಲು ಪೊಲೀಸ್ ಆಯುಕ್ತ ಚೇತನ ಆರ್. ಅವರಿಗೆ ಸೂಚಿಸಿದರು, ಅಂದು ನಗರದಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗದAತೆ ಪೊಲೀಸರು ಕಾರ್ಯನಿರ್ವಹಿಸಲಿ ತಿಳಿಸಿದರು. ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ  ಕಾರ್ಯಕ್ರಮ  ಸಿದ್ದತೆ ಕುರಿತು ವಿವರಿಸಿದರು.
      ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎಸ್‌ಪಿ ಇಶಾ ಪಂತ್, ಜಿಪಂ ಸಿಇಒ ಭಂವಾರ್‌ಸಿAಗ್ ಮೀನಾ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಅಪರ್ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮೊದಲಾದವರಿದ್ದರು.
===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net