ಪರಮಾಣುಶಕ್ತಿ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ

New
Published on

ನವದೆಹಲಿ : 8ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಮಾಣು ಕ್ಷೇತ್ರದ ಅಭಿವೃದ್ಧಿಗೆ 20 ಸಾವಿರ ಕೋಟಿ ೋಷಿಸುವ ಮೂಲಕ 2047ರ ವಿಕಸಿತ್ ಭಾರತ ಪರಿಕಲ್ಪನೆಯನ್ನು ಬಲವಾಗಿ ಎತ್ತಿ ಹಿಡಿದಿದ್ದಾರೆ.

ದೇಶದ ವಿದ್ಯುತ್ ಉತ್ಪಾದನೆ ಹಾಗೂ ಬೇಡಿಕೆಯ ತಖ್ತೆಯನ್ನು ಸರಿದೂಗಿಸುವಲ್ಲಿ ಈ ಅನುದಾನ ಪ್ರಮುಖವಾಗಿದೆ. ವಿದ್ಯುತ್ ವಲಯದ ಸುಧಾರಣೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಪರಮಾಣುಶಕ್ತಿ ಕ್ಷೇತ್ರದಲ್ಲಿರುವ ಖಾಸಗಿ ಹಿಡಿತವನ್ನು ನಿಯಂತ್ರಿಸಲು ಮಹತ್ವದ ಹೆಜ್ಜೆ ಇರಿಸಿದ್ದಾರೆ.

ಪರಮಾಣುಶಕ್ತಿ ಮಿಷನ್ ಸ್ಥಾಪಿಸುವುದಾಗಿ ಹೇಳಿರುವ ನಿರ್ಮಲ ಸೀತಾರಾಮನ್, ಆ ಮೂಲಕ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಸಂಶೋಧನೆಗೆ ಒತ್ತು ನೀಡಲಾಗುವುದು. 2033ರ ವೇಳೆಗೆ ಕನಿಷ್ಟ 5 ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮಾಡ್ಯುಲರ್ ರಿಯಾಕ್ಟರ್‌ಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಈಗಿರುವ ಪರಮಾಣುಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಯ 8 ಗಿಗಾ ವ್ಯಾಟ್ ಸಾಮರ್ಥ್ಯವನ್ನು 2047ರ ಹೊತ್ತಿಗೆ 100 ಗಿಗಾ ವ್ಯಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಈಗಿರುವ ಪರಮಾಣು ಶಕ್ತಿ ಕಾಯ್ದೆ ಹಾಗೂ ಪರಮಾಣು ಹಾನಿ ಕಾಯ್ದೆಗಳಿಗೆ ನಾಗರೀಕ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸುವ ಚಿಂತನೆ ಇದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net