ಕ್ಯಾಂಟರ್ ಗೆ ಬಸ್ ಡಿಕ್ಕಿ 20 ಮಂದಿಗೆ ಗಾಯ

12 RMN-MGD P1
Published on

ಮಾಗಡಿ: ರಸ್ತೆ ಮಧ್ಯೆ ನಿಂತಿದ್ದ ಕ್ಯಾಂಟರ್ ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ 20 ಕ್ಕೂ ಹೆಚ್ಚು ಮಂದಿಗೆ ಸಣ್ಣ, ಪುಟ್ಟ ಗಾಯ, ಡ್ರೈವರ್ ಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ತಾಲೂಕಿನ ಸೋಲೂರು ಮಂಗಳೂರು- ಬೆಂಗಳೂರು ರ‌್ಟೋಯ ಹೆದ್ದಾರಿಯ ಬಮೂಲ್ ಶಿಥಿಲ ಕೇಂದ್ರದ ಬಳಿ ಶನಿವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ.

ಕ್ಯಾಂಟರ್ ವಾಹನದ ಟೈರ್ ಪಂಚರ್ ಆಗಿ ಚಾಲಕ ರಸ್ತೆ ಮಧ್ಯೆ ನಿಲ್ಲಿಸಿದ್ದು ಈ ವೇಳೆ ಕುಣಿಗಲ್ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಡಿಕ್ಕಿಹೊಡೆದ ರಭಸಕ್ಕೆ

ಬಸ್ ನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಬಸ್‌ನ ಮುಂಭಾಗದಲ್ಲಿ ಸಿಲುಕಿದ ಬಸ್ ಚಾಲಕ ಸೋಮಶೇಖರ್ ರನ್ನು ಸ್ಥಳಿಯರು ಜೆಸಿಬಿ ಮೂಲಕ ಬಸ್‌ನ ಅವಶೇಷಗಳನ್ನು ತರರವುಗೊಳಿಸಿ ರಕ್ಷಣೆ ಮಾಡಿ ನೆಲಮಂಗಲ ಆಸ್ಪತ್ರೆಗೆ ರವಾನಿಸಿದರೆ, ಸಣ್ಣ, ಪುಟ್ಟ ಗಾಯಗೊಂಡ ಅಸಿಯಾ ಬಾನು, "ಜಿರಾ ಕೌಸರ್, ಪ್ರೀತಿ, ಪಾರ್ವತಿ, ಜ್ಯೋತಿ, ಶಶಿಕಲಾ, ಪ್ರೇಮ ಕುಮಾರಿ ಸೇರಿದಂತೆ 20 ಕ್ಕೂ ಹೆಚ್ಚು ಮಂದಿಯನ್ನು ಚಿಕಿತ್ಸೆಗಾಗಿ ಆಂಬುಲೇನ್ಸ್ ಮೂಲಕ ನೆಲಮಂಗಲ ಆಸ್ಪತ್ರೆಗೆ ರವಾನಿಸಲಾಗಿದೆ.

ಕ್ಯಾಂಟರ್ ಚಾಲಕನ ಅಜಾಗರುಕತೆಯೆ ಅಫಘಾತಕ್ಕೆ ಕಾರಣ ಎನ್ನಲಾಗಿದೆ ಘಟನೆ ತಿಳಿದ ಕೂಡಲೇ ಕುದೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net