ಮಂಡ್ಯ: ಅಕ್ರಮ ಸಾಗಣೆ ವೇಳೆ 20 ರಾಸುಗಳ ರಕ್ಷಣೆ

gou1
Published on

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕ್ಯಾಂಟರ್ ಲಾರಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ 20 ಕ್ಕೂ ಹೆಚ್ಚು ರಾಸುಗಳನ್ನು ರಕ್ಷಿಸಲಾಗಿದೆ. ಪೊಲೀಸರ ಸಹಕಾರದೊಂದಿಗೆ ಜ್ಞಾನ್ ಪೌಂಡೇಶನ್​​ನ ಗೋರಕ್ಷಕ ಪಡೆಯ ಕಾರ್ಯಕರ್ತರು ಈ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕಳ್ಳನಕೆರೆ ಗ್ರಾಮದ ಬಳಿ ರಾಸುಗಳನ್ನು ಕಟ್ಟಿ ಹಾಕಿ ಕ್ಯಾಂಟರ್ ಲಾರಿ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಾಹನ ಅಡ್ಡಗಟ್ಟಿದ ಪೊಲೀಸರು ಮತ್ತು ಸೇವಾಕರ್ತರು ವಾಹನದ ಪರಿಶೀಲನೆ ನಡೆಸಿದರು. ಲಾರಿಯ ಹಿಂದಿನ ಬಾಗಿಲು ತೆಗೆದು ನೋಡಿದಾಗ ಹಸು ಮತ್ತು ಎಮ್ಮೆಗಳನ್ನು ಹಗ್ಗದಿಂದ ಕಟ್ಟಿ ಸಾಗಿಸುತ್ತಿದ್ದುದ್ದು ಪತ್ತೆಯಾಗಿದೆ.

ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಮಾರು 20 ರಾಸುಗಳನ್ನು ಕಟುಕರ ಕೈಯಿಂದ ಪಾರು ಮಾಡಲಾಗಿದೆ. ಪೊಲೀಸರಿಗೆ ಬೆದರಿ ವಾಹನ ಚಾಲಕನು, ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net