2.98 ಲ ರೂ. ಉಳಿತಾಯ ಆಯವ್ಯಯ ಮಂಡನೆ

22GPB2
Published on

ಟಪ್ರಭಾ: ಪಟ್ಟಣದ ಪುರಸಭೆಯ 2025&26ನೇ ಸಾಲಿನ ಆಯವ್ಯಯವನ್ನು ಮುಖ್ಯಾಧಿಕಾರಿ ಎಂ.ಎಸ್​.ಪಾಟೀಲ ಶುಕ್ರವಾರ ಮಂಡಿಸಿದರು.

ಪುರಸಭೆಯ ಆಯವ್ಯಯ ಒಟ್ಟು ಮೊತ್ತ 11.22 ಕೋಟಿ ರೂ. ಆಗಿದ್ದು, ಒಟ್ಟು 5.37 ಕೋಟಿ ರೂ. ರಾಜಸ್ವ ಆದಾಯ ಒಳಗೊಂಡಿದ್ದು, ಬಂಡವಾಳ ಆದಾಯ 3.22 ಕೋಟಿ ರೂ. ಮತ್ತು ವಿಶೇಷ ವಸೂಲಾತಿ ಆದಾಯ 2.63 ಕೋಟಿ ರೂ. ಇದೆ.

ರಾಜಸ್ವ ಆದಾಯದಲ್ಲಿ ಅಂದಾಜು ವೆಚ್ಚ 5.35 ಕೋಟಿ ರೂ., ಬಂಡವಾಳ ಆದಾಯದಲ್ಲಿ ಅಂದಾಜು ವೆಚ್ಚ 3.21 ಕೋಟಿ ರೂ., ಮತ್ತು ವಿಶೇಷ ವಸೂಲಾತಿ ಆದಾಯದಲ್ಲಿ ಅಂದಾಜು ವೆಚ್ಚ 2.63 ಕೋಟಿ ರೂ.ಇದೆ. ಒಟ್ಟು ಅಂದಾಜು ವೆಚ್ಚ 11.19 ಕೋಟಿ ರೂ., ಪುರಸಭೆಯ ಸಿಬ್ಬಂದಿ ವೇತನ, ರಸ್ತೆ ಕಾಮಗಾರಿ, ಸ್ವಚ್ಛತೆ, ನತ್ಯಾಜ್ಯ ವಸ್ತು ವಿಲೇವಾರಿ, ದುರಸ್ತಿ ಸೇರಿ ಇತರ ಕಾಮಗಾರಿಗಳಿಗೆ ಹಾಗೂ ನಿಯಮಾನುಸಾರ ಶೇ.24.10, ಶೇ.7.25, ಶೇ.5 ಹಾಗೂ ಶೇ.1 ಮೀಸಲಾತಿ ಕಾಯ್ದಿರಿಸಲಾಗಿದೆ.

ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗೆ ಮೀಸಲಿರಿಸಿ 2.98 ಲ ರೂ. ಉಳಿತಾಯ ಆಯವ್ಯಯ ಮಂಡಿಸಲಾಗಿದೆ. ಆಯವ್ಯಯಕ್ಕೆ ಆಡಳಿತಾ-ಧಿಕಾರಿಯೂ ಆದ ಎಸಿ ಎ್​.ಪ್ರಭಾವತಿ ಅನುಮೋದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net