ನಾರಾಯಣಪುರ ಜಲಾಶಯದಿಂದ ೨.೭೫ ಟಿಎಂಸಿ ನೀರು ಕೃಷ್ಣಾ ನದಿಗೆ ಬಿಡುಗಡೆ : ಡಾ.ಅಜಯ

IMG-20240107-WA0031
Published on


ಮೆಣಸಿನಕಾಯಿ ರೈತರಿಗೆ ನೀರಿನಿಂದ ಅನುವು ಡಾ.ಸಿಂಗ್ ಹರ್ಷ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಸೇರಿ ಇತರೆ ಬೆಳೆಗಳಿಗೆ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ೨.೭೫ ಟಿಎಂಸಿ ನೀರು ಹರಿದು ಬರಲಿದ್ದು, ಇದು ಜೇವರ್ಗಿ ಮೆಣಸಿನಕಾಯಿ ಬೆಳೆಗೆ ಅನುಕೂಲವಾಗಲಿದೆ ಎಂದು ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದ್ದಾರೆ.
ಉಭಯ ಜಲಾಶಯಗಳಿಂದ ನೀರು ಹರಿಸಲು ಮಹತ್ವದ ನಿರ್ಣಯ ಕೈಗೊಂಡ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಸಂಕಷ್ಟದ ಸಮಯದಲ್ಲೂ ರೈತರ ಕೈ ಹಿಡಿದಿದೆ. ಕಾಂಗ್ರೆಸ್ ಸರ್ಕಾರ ಸದಾಕಾಲ ರೈತ ಸ್ನೇಹಿ ಎಂಬುದಕ್ಕೆ ಈ ನಿರ್ಣಯವೇ ಸಾಕ್ಷಿ ಎಂದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಡಾ.ಅಜಯ್‌ಸಿಂಗ್, ಬರಗಾಲದ ಸಂಕಷ್ಟದಲ್ಲೂ ಉಭಯ ಜಲಾಶಯಗಳಿಂದ  ಕಾಲುವೆಗಳಗೆ ನೀರು ಹರಿಸುವ ನಿರ್ಣಯ ಕೈಗೊಂಡು ರೈತರ ಪರವಾಗಿ ನಿಂತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಿz್ದÁರೆ.
ಜೇವರ್ಗಿಯಲ್ಲಿನ ಮೆಣಸಿನಕಾಯಿ ಸೇರಿ ಇತರೆ ಬೆಳೆಗಳ ರೈತರು ನೀರು ಹಿತಮಿತವಾಗಿ ಬಳಸುವ ಮೂಲಕ ಇದರ ಲಾಭ ಪಡೆಯಬೇಕು. ಕಳೆದ ವರ್ಷದ ಜಲಾಶಯಗಳಲ್ಲಿನ ನೀರಿನ ಸಂಗ್ರಹಕ್ಕೆ ಹೋಲಿಸಿದಾಗ ಈ ಬಾರಿ ಪ್ರಸಕ್ತ ಶೇ.೫೦ ರಷ್ಟು ಸಂಗ್ರಹ ಕಡಿಮೆ ಇದೆ. ಮುಂಬರುವ ಬೇಸಿಗೆಯಲ್ಲಿ ಜನ- ಜಾನುವಾರು ಕುಡಿಯುವ ನೀರಿಗೆ ಜಲಾಯದಲ್ಲಿ ನೀರು ಸಂಗ್ರಹಿಸಿಡುವುದು ಅಗತ್ಯ ಎಂದಿದ್ದಾರೆ.
ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಇಂಡಿ, ಜೇವರ್ಗಿ, ಮುಡಬೂಳ್ ಶಾಖಾ ಕಾಲುವೆಗಳಿಗೆ ಕೃಷ್ಣೆಯ ನೀರು ಹರಿದು ಬರಲಿದ್ದು, ಈ ಕಾಲುವೆಗಳ ಇಕ್ಕೆಲಗಳಲ್ಲಿರುವ ರೈತರು ನೀರಿನ ಸದ್ಬಳಕೆಗೆ ಮುಂದಾಗಬೇಕು. ಪರಸ್ಪರ ಸಹಕಾರದಿಂದ ನೀರು ಪಡೆದು ಮೆಣಸಿನಕಾಯಿ ಬೆಳೆ ಉತ್ಪನ್ನ ಪಡೆಯಬೇಕು. ಬೆಳೆ ಸಂರP್ಷÀಣೆಗೆ ನೀರು ಪಡೆಯಲು ರೈತರು ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಪರಸ್ಪರ ಸಹಕಾರದಿಂದ ವರ್ತಿಸಬೇಕು ಎಂದು ಡಾ.ಅಜಯ್‌ಸಿಂಗ್ ಕೋರಿz್ದÁರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net