ಮದುವೆ ಆಗುವುದಾಗಿ ನಂಬಿಸಿ 2.75 ಲಕ್ಷ ರೂ. ವಂಚನೆ

Online Fraud
Published on

* ಬಿಬಿಎಂಪಿಯಲ್ಲಿ ರೆವೆನ್ಯೂ ಇನ್​ಸ್ಪೆಕ್ಟರ್​ ಎಂದು ನಂಬಿಸಿದ್ದ

ಬಿಡದಿ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪರಿಚತ ಯುವಕನೊಬ್ಬ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ 2.75 ಲಕ್ಷ ರೂ. ಪಡೆದು ವಂಚಿಸಿರುವ ದೂರು ಕುಂಬಳಗೂಡು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

ಬೆಂಗಳೂರಿನ ರಾಮಸಂದ್ರದ ಯುವತಿ ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮದುವೆ ಆಗುವ ಸಂಬಂಧ ಮಾಹಿತಿಯನ್ನು ಅಂತರ್ಜಾಲ ತಾಣದಲ್ಲಿ ನೋಂದಣಿ ಮಾಡಿದ್ದರು. ಈ ವೇಳೆ ಮೈಸೂರಿನ ಇಲವಾಲದ ಯಶವಂತ್​ ಎನ್ನುವಾತ ಬಿಸಿಎ ಪದವೀಧರನಾಗಿದ್ದು, ಬಿಬಿಎಂಪಿಯಲ್ಲಿ ರೆವಿನ್ಯೂ ಇನ್​ಸ್ಪೆಕ್ಟರ್​ ಆಗಿದ್ದೇನೆ, ನಿಮ್ಮ ಪ್ರೊಫೈಲ್  ಇಷ್ಟವಾಗಿದೆ ಎಂದು ರಿಕ್ವೆಸ್ಟ್​ ಕಳುಹಿಸಿದ್ದ. ಅಲ್ಲದೆ, ಯುವತಿಗೆ ಕರೆ ಮಾಡಿ, ನಮ್ಮ ತಂದೆ ತಾಯಿಯನ್ನು ಕರೆದುಕೊಂಡು ನಿಮ್ಮನ್ನು ನೋಡಲು ಬರುತ್ತೇನೆ ಎಂದು ಹೇಳಿದ್ದಾನೆ. ಆದರೆ, ಮೂರು ತಿಂಗಳಾದರೂ ಯುವತಿಯ ಮನೆ ಕಡೆಗೆ ಯುವಕ ಸುಳಿಯಲೇ ಇಲ್ಲ.

ಇದಾದ ಸುಮಾರು ಎರಡು ತಿಂಗಳ ನಂತರ ಮತ್ತೆ ಯುವತಿಗೆ ಕರೆ ಮಾಡಿ, ಇಲ್ಲದ ಕಥೆ ಹೇಳಿ ನಂಬಿಸಿ ಮತ್ತೆ ಸಂಪರ್ಕಕ್ಕೆ ಬರುವ ಯತ್ನ ಮಾಡಿದ್ದಾನೆ. ಈತನ ಮಾತನ್ನು ನಂಬಿದ ಯುವತಿಯಿಂದ 2013ರ ಅಕ್ಟೋಬರ್​ 6ರಿಂದ ಇಲ್ಲಿಯವರೆಗೂ ಸುಮಾರು 2.75 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಬ್ಯಾಂಕ್​ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ.

ಬಳಿಕ ಈತನ ವರ್ತನೆಯಿಂದ ಅನುಮಾನಗೊಂಡ ಯುವತಿ, ಯಶವಂತ್​ನನ್ನು ಪ್ರಶ್ನೆ ಮಾಡಿದಾಗ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಹಣ ಕೇಳಿದರೆ ನಿನ್ನ ಫೋಟೋಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಯುವತಿ ತಂದೆ ಕುಂಬಳಗೂಡು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net