ಸಾಲಿಗ್ರಾಮ ಸಹಕಾರ ಸಂಘಕ್ಕೆ 2.11 ಲಕ್ಷ ರೂ. ಲಾಭ

IMG_20240918_124532_781
Published on

ಸಾಲಿಗ್ರಾಮ: ಆಡಳಿತ ಮಂಡಳಿ ಶ್ರಮದಿಂದ 2023-24ನೇ ಸಾಲಿನಲ್ಲಿ ಸಾಲಿಗ್ರಾಮ ಕೃಷಿ ಪತ್ತಿನ ಸಹಕಾರ ಸಂಘವು 2,11,400 ರೂ. ಲಾಭ ಗಳಿಸಿದೆ ಎಂದು ಸಾಲಿಗ್ರಾಮ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರಣ್ ಕುಮಾರ್ ತಿಳಿಸಿದರು.


ಪಟ್ಟದ ಮುಸ್ಲಿಂ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಹಿಂದಿನ ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿ ಅವರಿಂದ ಸಂಘ ನಷ್ಟದಲ್ಲಿತ್ತು. ಆನಂತರ ಮುಚ್ಚುವ ಹಂತಕ್ಕೆ ತಲುಪಿತು. ಆದರೆ, ನಮ್ಮ ಆಡಳಿತ ಮಂಡಳಿ ಶ್ರಮಪಟ್ಟು ಸಾಲ ವಸೂಲಾತಿ ಮಾಡಿ ನಷ್ಟವನ್ನು ಸರಿದೂಗಿಸಿ ಈ ವರ್ಷ ಲಾಭಾಂಶ ಪಡೆದಿದೆ. ಸಂಘದ ಮತ್ತಷ್ಟು ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಬೇಕಿದೆ. ಷೇರುದಾರರ ಸಲಹೆಯಂತೆ ಸಂಘದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಸಂಘವು ಹಣಕಾಸಿನ ವ್ಯವಹಾರಕ್ಕೆ ಹೊಸೂರು ಎಂಡಿಸಿಸಿ ಬ್ಯಾಂಕ್‌ಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಸಾಲಿಗ್ರಾಮ ತಾಲೂಕು ಆಗಿರುವುದರಿಂದ ತಾಲೂಕು ಕೇಂದ್ರಕ್ಕೆ ಎಂಡಿಸಿಸಿ ಬ್ಯಾಂಕ್ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು.


ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ, ಸಂಘವು ಇತ್ತೀಚಿನ ದಿನಗಳಲ್ಲಿ ನಷ್ಟಕ್ಕೀಡಾಗುತ್ತಿದೆ. ಮುಚ್ಚುವ ಹಂತದಲ್ಲಿದ್ದ ಸಂಘ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ಎಂಡಿಸಿಸಿ ಬ್ಯಾಂಕ್ ಆರಂಭಿಸುವಂತೆ ಸಂಬಂಧಪಟ್ಟ ಜಿಲ್ಲಾ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಶಾಸಕರಿಗೆ ಒತ್ತಡ ಹೇರುತ್ತೇನೆ ಎಂದರು.


ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಅಶೋಕ್, ನಾಗೇಂದ್ರ, ಸತೀಶ್, ಚಂದ್ರನಾಯಕ, ಮಹೇಶ್, ಅನಂತ್, ಜಯರಾಮಗೌಡ, ರುಕ್ಮಿಣಿ, ಅಶ್ವಿನಿ, ಸಣ್ಣದೇವಮ್ಮ, ದಿನೇಶ್, ಸಿಬ್ಬಂದಿ ಸುರೇಶ್, ರಾಮೇಗೌಡ, ಶಶಿಕುಮಾರ್, ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್, ಸಾ.ರಾ.ರವೀಶ್, ಹೊಸೂರು ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರತಾಪ್, ಸಹಕಾರ ಸಂಘಗಳ ಸೂಪರಿಂಟೆಂಡೆಂಟ್ ದಿನೇಶ್, ಷೇರುದಾರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net