

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 197 ಡೆಂಘೆ ಪ್ರಕರಣಗಳು ದೃಢಪಟ್ಟಿದ್ದು, ಮೈಸೂರಿನಲ್ಲಿ ಒಂದು ಸಾವು ಸಂಭವಿಸಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ಒಂದು ಮಗು ಹಾಗೂ 1ರಿಂದ 18 ವರ್ಷದೊಳಗಿನ 63 ಮಂದಿ ಮತ್ತು 18 ವರ್ಷಗಳು ಮೇಲ್ಪಟ್ಟ 133 ಮಂದಿ ಡೆಂಘೆ ಪೀಡಿತರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 892 ಡೆಂಘೆ ಶಂಕಿತರಿಗೆ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಡೆಂಘೆ ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆಯಾಗಿದೆ. ಏಳು ಮಂದಿ ಮೃಪಟ್ಟಿದ್ದಾರೆ. ಡೆಂಘೆ ಸೋಂಕಿತರಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 303 ಚಿಕಿತ್ಸೆ ಪಡೆಯುತ್ತಿದ್ದಾರೆ.