ಕಲಬುರಗಿಯ ೧೧ ಸೇರಿ ೧೯೫ ತಾಲೂಕುಬರಪೀಡಿತ ಘೋಷಣೆಗೆ ಪ್ರಸ್ತಾವನೆ

Priyank Kharge
Published on

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ಜಿಲ್ಲೆಯ ೧೧ ಸೇರಿ ರಾಜ್ಯದ ೧೯೫ ತಾಲೂಕು ಬರಪೀಡಿತ ಘೋಷಿಸಲು ಸರ್ಕಾರದ ಸಂಪುಟ ಉಪಸಮಿತಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ..
ಬರಪೀಡಿತ ತಾಲೂಕುಗಳ ನಿರ್ವಹಣೆಗಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಸಂಪುಟದ ಉಪ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿಎಂ ಘೋಷಣೆ ಬೆನ್ನಲ್ಲೇ ಪರಿಹಾರ ಕಾರ್ಯ ಶುರುವಾಗಲಿದೆ ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಪೂರೈಕೆ ಮೊದಲ ಆದ್ಯತೆಯಾಗಿದ್ದು, ಈ ಸಮಸ್ಯೆ ಬಗೆಹರಿಸಲು ಎಸ್‌ಆರ್‌ಡಿಎಫ್ ಅನುದಾನ ಬಳಸಿಕೊಳ್ಳಲಾಗುವುದು. ಕುಡಿವ ನೀರಿಗಾಗಿಯೇ ಸರ್ಕಾರ ಎಲ್ಲ ಜಿ¯್ಲÁಧಿಕಾರಿಗಳಿಗೆ ೪೯೨ ಕೋಟಿ ಅನುದಾನ ಒದಗಿಸಿದೆ. ಹೆಚ್ಚುವರಿಯಾಗಿ ೪೦೦ ಕೋಟಿ ರೂ. ಮೀಸಲಿಟ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜï ಇಲಾಖೆಯಡಿ ರಾಜ್ಯದ ಪ್ರತಿ ಜಿ¯್ಲೆಯ ಸಿಇಒಗೆ ಈಗಾಗಲೇ ಒಂದು ಕೋಟಿ ಅನುದಾನ ನೀಡಿದ್ದು, ಹೆಚ್ಚುವರಿಯಾಗಿ ಕಂಟೆAಜೆನ್ಸಿ ಯೋಜನೆ ಅಡಿ ೭ ಕೋಟಿ ನೀಡಲಾಗಿದೆ. ಜಾನುವಾರುಗಳಿಗೆ ಮೇವು ಖರೀದಿಗಾಗಿ ಈಗಾಗಲೇ ೨೦ ಕೋಟಿ ರೂ. ಬಿಡುಗಡೆ ಮಾಡಿದ್ದು, ಮೇವು ಬೆಳೆಯುವ ರೈತರಿಗೆ ಉಚಿತ ಬಿತ್ತನೆ ಬೀಜ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯ ಈ ವರ್ಷ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಎಂತಹ ಸಂದರ್ಭ ಬಂದರೂ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ರಾಜ್ಯದ ಎಲ್ಲ ಜಿ¯್ಲÉಗಳಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿಸಿ ದಾಸ್ತಾನು ಮಾಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net