194 ಜನರಿಗೆ ಕೋವಿಡ್ ವೈರಸ್ ದೃಢ

Corona
Published on

ಹಾವೇರಿ: ಜಿಲ್ಲೆಯಲ್ಲಿ ಶನಿವಾರ 194 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. 310 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ. 7 ಜನರು ಮೃತಪಟ್ಟಿದ್ದಾರೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ. ರಾಣೆಬೆನ್ನೂರ ತಾಲೂಕಿನಲ್ಲಿ ಅತಿಹೆಚ್ಚು 46, ಹಾವೇರಿ ತಾಲೂಕಿನಲ್ಲಿ 38, ಹಿರೇಕೆರೂರ ತಾಲೂಕಿನಲ್ಲಿ 37, ಹಾನಗಲ್ಲ ತಾಲೂಕಿನಲ್ಲಿ 25, ಶಿಗ್ಗಾಂವಿ, ಸವಣೂರ ತಾಲೂಕಿನಲ್ಲಿ ತಲಾ 20, ಬ್ಯಾಡಗಿ ತಾಲೂಕಿನಲ್ಲಿ 6 ಇತರೆ ಇಬ್ಬರು ಸೇರಿ ಒಟ್ಟು 194 ಜನರಿಗೆ ಶನಿವಾರ ಪಾಸಿಟಿವ್ ವರದಿಯಾಗಿದೆ. ಹಾವೇರಿ ತಾಲೂಕಿನಲ್ಲಿ 79, ರಾಣೆಬೆನ್ನೂರ ತಾಲೂಕಿನಲ್ಲಿ 75, ಶಿಗ್ಗಾಂವಿ ತಾಲೂಕಿನಲ್ಲಿ 48, ಹಾನಗಲ್ಲ ತಾಲೂಕಿನಲ್ಲಿ 41, ಹಿರೇಕೆರೂರ ತಾಲೂಕಿನಲ್ಲಿ 24, ಸವಣೂರ ತಾಲೂಕಿನಲ್ಲಿ 20, ಬ್ಯಾಡಗಿ ತಾಲೂಕಿನಲ್ಲಿ 16 ಜನ ಇತರೆ 7 ಸೇರಿ ಒಟ್ಟು 310 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 19,637 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 17,376 ಜನ ಗುಣವಾಗಿದ್ದಾರೆ. 429 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಸದ್ಯ 1,832 ಸಕ್ರಿಯ ಪ್ರಕರಣಗಳಿದ್ದು, 1,471 ಜನರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 361 ಜನರು ಹೋಂ ಐಸೋಲೇಷನ್​ನಲ್ಲಿದ್ದಾರೆ.

7 ಜನರ ಸಾವು: ರಾಣೆಬೆನ್ನೂರ ತಾಲೂಕಿನ 61 ಹಾಗೂ 62 ವರ್ಷದ ಇಬ್ಬರು ವೃದ್ಧರು, 62 ವರ್ಷದ ವೃದ್ಧೆ ಸೇರಿ ಮೂವರು, ಹಾವೇರಿ ತಾಲೂಕಿನ 50 ವರ್ಷದ ಮಹಿಳೆ, 60 ವರ್ಷದ ವೃದ್ಧ ಸೇರಿ ಇಬ್ಬರು, ಹಿರೇಕೆರೂರ ತಾಲೂಕಿನ 68 ವರ್ಷದ ವೃದ್ಧೆ, ಶಿಗ್ಗಾಂವಿ ತಾಲೂಕಿನ 38 ವರ್ಷದ ಪುರುಷ ಸೇರಿ ಒಟ್ಟು 7 ಜನರು ಕೋವಿಡ್​ನಿಂದ ಶನಿವಾರ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net