

ಬೆಳಗಾವಿ: ತಾಲೂಕಿನ ಸುಕ್ಷೇತ್ರ ಸುಳೇಬಾವಿ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಮಾ.18ರಿಂದ 26ರ ವರೆಗೆ ಜರುಗಲಿದ್ದು, ಪ್ರಚಾರಾರ್ಥವಾಗಿ ಭಾನುವಾರ ಬೃಹತ್ ಮೆಗಾ ಬೈಕ್ ರ‌್ಯಾಲಿ ನಡೆಯಿತು.
ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾಥಾಗೆ ಚಾಲನೆ ನೀಡಲಾಯಿತು. ದೇವಸ್ಥಾನ ಆವರಣದಿಂದ ಆರಂಭಗೊಂಡು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರ‌್ಯಾಲಿ, ಖನಗಾಂವ ಬಿ.ಕೆ., ಅಷ್ಟೇ, ಕಣಬರ್ಗಿ ಗ್ರಾಮದ ರಸ್ತೆ ಮಾರ್ಗದ ಮೂಲಕ ಬೆಳಗಾವಿ ನಗರ ಪ್ರವೇಶಿಸಿತು.
ರಾಣಿ ಚನ್ನಮ್ಮ ವೃತ್ತದಿಂದ ಸಾಗಿ ಧರ್ಮವೀರ ಸಂಭಾಜಿ ಮಹಾರಾಜ ವೃತ್ತ (ಬೋಗಾರವೇಸ್) ವರೆಗೆ ನಡೆಯಿತು. ನಂತರ ತಿರುಗಿ ಅದೇ ಮಾರ್ಗವಾಗಿ ಚನ್ನಮ್ಮ ವೃತ್ತದ ಮೂಲಕ ಗಾಂಧಿ ನಗರದಿಂದ ಸಾಂಬ್ರಾ ರಸ್ತೆ ಮಾರ್ಗವಾಗಿ ಸುಳೇಬಾವಿ ಗ್ರಾಮಕ್ಕೆ ತಲುಪಿತು. ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಚೇರ್ಮನ್ ದೇವಣ್ಣ ಬಂಗೆನ್ನವರ, ಸದಸ್ಯ ಬಸನಗೌಡ ಹುಂಕರಿಪಾಟೀಲ ಇತರರಿದ್ದರು.