ರಾಜ್ಯದಲ್ಲಿ 185 ಹೊಸ ಡೆಂಘೆ ಪ್ರಕರಣ ಪತ್ತೆ

Dengue
Published on

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ಅಬ್ಬರಿಸುತ್ತಿದ್ದು, ಮಂಗಳವಾರ ಬೆಂಗಳೂರಿನಲ್ಲಿ 91, ಧಾರವಾಡದಲ್ಲಿ 30, ಚಿತ್ರದುರ್ಗದಲ್ಲಿ 25 ಸೇರಿ ಹೊಸದಾಗಿ 185 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಪ್ರಕರಣಗಳಲ್ಲಿ ವರ್ಷದೊಳಗಿನ ಒಂದು ಮಗು ಹಾಗೂ 1ರಿಂದ 18 ವರ್ಷದೊಳಗಿನ 81 ಮಂದಿ ಮತ್ತು 18 ವರ್ಷ ಮೇಲ್ಪಟ್ಟ 103 ಮಂದಿ ಡೆಂಘೆ ಪೀಡಿತರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 948 ಶಂಕಿತರಿಗೆ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 7,547ಕ್ಕೆ ಏರಿಕೆಯಾಗಿದೆ. ಏಳು ಮಂದಿ ಮೃಪಟ್ಟಿದ್ದಾರೆ. ಸೋಂಕಿತರಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 346 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net