180 ಜನರಿಗೆ ತಗುಲಿದ ಕರೊನಾ ಸೋಂಕು

carona logo
Published on

ಕಾರವಾರ: ಜಿಲ್ಲೆಯಲ್ಲಿ 180 ಜನರಿಗೆ ಹೊಸದಾಗಿ ಕರೊನಾ ಸೋಂಕು ತಗುಲಿದೆ. 24 ಜನ ಗುಣವಾಗಿದ್ದಾರೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 8397 ಕ್ಕೆ ಏರಿಕೆಯಾಗಿದ್ದು, 6036 ಜನ ಗುಣವಾಗಿದ್ದಾರೆ, 2258 ಸಕ್ರಿಯ ಪ್ರಕರಣಗಳಿವೆ. 103 ಸಾವು ಸಂಭವಿಸಿದೆ.

ಕಾರವಾರದಲ್ಲಿ 44, ಅಂಕೋಲಾದಲ್ಲಿ 19, ಕುಮಟಾದಲ್ಲಿ 50, ಹೊನ್ನಾವರದಲ್ಲಿ 5, ಭಟ್ಕಳದಲ್ಲಿ 3, ಶಿರಸಿಯಲ್ಲಿ 29, ಮುಂಡಗೋಡಿನಲ್ಲಿ 23, ಹಳಿಯಾಳ ಹಾಗೂ ದಾಂಡೇಲಿ ಸೇರಿ 7 ಜನದಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಕಾರವಾರದಲ್ಲಿ 10, ಹೊನ್ನಾವರದಲ್ಲಿ 2, ಶಿರಸಿಯಲ್ಲಿ 1, ಹಳಿಯಾಳ ಮತ್ತು ದಾಂಡೇಲಿ ಸೇರಿ 8, ಜೊಯಿಡಾದಲ್ಲಿ 3 ಜನ ಗುಣವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net