ಮಸ್ಕತ್​ನಿಂದ 180 ಭಾರತೀಯರ ಆಗಮನ

28bkl2
Published on

ವಿಜಯವಾಣಿ ಸುದ್ದಿಜಾಲ ಭಟ್ಕಳ

ಮಸ್ಕತ್​ನಿಂದ ಹೊರಟ 24 ಭಟ್ಕಳಿಗರು ಸೇರಿ 180 ಭಾರತೀಯರು ಸುರಕ್ಷಿತವಾಗಿ ಭಾನುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ.

ಮಸ್ಕತ್​ನ ಇಂಡಿಯನ್ ಸೋಶಿಯಲ್ ಕ್ಲಬ್ ವತಿಯಿಂದ ಸಲಾಮ್ ಏರ್ ಸಂಸ್ಥೆ ಭಾರತೀಯರನ್ನು ಮಂಗಳೂರಿಗೆ ತಲುಪಿಸಲು ವಿಮಾನದ ವ್ಯವಸ್ಥೆ ಮಾಡಿತ್ತು. ಈ ವಿಮಾನವು ಜೂನ್ 24ರಂದು ಮಸ್ಕತ್​ನಿಂದ ಮಂಗಳೂರಿಗೆ ಬರಲು ನಿರ್ಧರಿಸಿತ್ತು. ಆದರೆ, ಕಾರಾಣಾಂತರದಿಂದ ರದ್ದಾಗಿತ್ತು. ಜೂ. 28ಕ್ಕೆ ವಿಮಾನ ಮಂಗಳೂರು ನಿಲ್ದಾಣ ತಲುಪಲು ಪರವಾನಗಿ ಪಡೆದುಕೊಂಡಿತ್ತು. 180 ಪ್ರಯಾಣಿಕರು ಭಾನುವಾರ ನಸುಕಿನ 2 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿತು.

ಮಸ್ಕತ್ ವಿಮಾನ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಮಂಗಳೂರಿನಲ್ಲಿ ಭಟ್ಕಳದ ಜಮಾತ್ ಉಲ್ ಮುಸ್ಲಮೀನ್ ಪ್ರಯಾಣಿಕರನ್ನು ಭಟ್ಕಳಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಿದೆ.

ಸದ್ಯ ಭಟ್ಕಳದಲ್ಲಿ ಮಾಜ್ಲಿಸೆ ತಂಜೀಮ್ ಸಂಸ್ಥೆಯು 24 ಪ್ರಯಾಣಿಕರಿಗಾಗಿ ಅಂಜುಮಾನ್ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net