18 ಜನರು ಆಸ್ಪತ್ರೆಯಿಂದ ಬಿಡುಗಡೆ

6KWR4
Published on

ಕಾರವಾರ: ಕರೊನಾ ಸೋಂಕಿತ 18 ಜನರು ಗುಣವಾಗಿದ್ದು, ಶನಿವಾರ ಇಲ್ಲಿನ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಶಿರಸಿಯ ಐವರು, ಕುಂದಾಪುರದ ಇಬ್ಬರು, ಹೊನ್ನಾವರ, ಯಲ್ಲಾಪುರದ ತಲಾ ನಾಲ್ವರು, ಸಿದ್ದಾಪುರ, ಹಳಿಯಾಳದ ತಲಾ ಒಬ್ಬರು ಕೇರಳ ಕರಕುಂಡೆಯ ಒಬ್ಬ ನನ್ನು ಬಿಡುಗಡೆ ಮಾಡಿ, ಶುಭ ಹಾರೈಸಿ ಆಂಬುಲೆನ್ಸ್​ನಲ್ಲಿ ಕಳಿಸಿಕೊಡಲಾಯಿತು. ಬಿಡುಗಡೆಯಾದವರಲ್ಲಿ 6 ಮಕ್ಕಳು, ಮೂವರು ಮಹಿಳೆಯರು, ಉಳಿದವರು ಪುರುಷರಿದ್ದಾರೆ.

ಶಿರಸಿಯಿಂದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣ: ಮಹಾರಾಷ್ಟ್ರದಿಂದ ನೇತ್ರಾವತಿ ಎಕ್ಸ್​ಪ್ರೆಸ್ ರೈಲಿನಲ್ಲಿ ಜೂನ್ 4 ರಂದು ಪತಿಯ ಜತೆ ಆಗಮಿಸಿದ ಕಾರವಾರದ 61 ವರ್ಷದ ಮಹಿಳೆಯೊಬ್ಬಳಲ್ಲಿ (ಯುಕೆ-94) ಕರೊನಾ ಕಾಣಿಸಿಕೊಂಡಿದೆ. ಆಕೆಯನ್ನು ಒಂದು ದಿನ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಿಸಿ ಕ್ರಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಕರೊನಾ ಖಚಿತವಾದ 34 ವರ್ಷದ ವ್ಯಕ್ತಿಯ(ಯುಕೆ-93)ವ್ಯಕ್ತಿಯ ಸಂಚಾರದ ವಿವರನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮೇ 22 ರಂದು ಕತಾರ್​ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದ ಅವರು ಬೆಂಗಳೂರಿನಲ್ಲಿ 7 ದಿನ ಕ್ವಾರಂಟೈನ್ ಮುಗಿಸಿದ್ದರು. ಮೇ 23 ರಂದು ಅವರ ಗಂಟಲ ದ್ರವದ ಮಾದರಿ ಪರಿಶೀಲಿಸಿದಾಗ ಅವರಲ್ಲಿ ಯಾವುದೇ ರೋಗ ಕಂಡುಬಂದಿರಲಿಲ್ಲ. 7 ದಿನದ ಕ್ವಾರಂಟೈನ್ ಮುಗಿಸಿದ ಅವರನ್ನು ಮೇ 30 ರಂದು ಬಿಡುಗಡೆ ಮಾಡಲಾಗಿತ್ತು. ಅಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಟ್ರಾವೆಲ್ಸ್​ನಲ್ಲಿ ಬಂದು, 31 ರಂದು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಶಿರಸಿಗೆ ತಲುಪಿದ್ದಾರೆ. ಅಲ್ಲಿಂದ ಪತ್ನಿಯೊಂದಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕಾರವಾರಕ್ಕೆ ಬಂದು ಮನೆಯಲ್ಲಿದ್ದರು. ಈ ವೇಳೆ ರೋಗದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 4 ರಂದು ಅವರು ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಗಂಟಲ ದ್ರವದ ಮಾದರಿ ಪರಿಶೀಲನೆ ಬಳಿಕ ರೋಗ ಖಚಿತವಾಗಿದೆ. ಜಿಲ್ಲೆಯಲ್ಲಿ ಕರೊನಾ ರೋಗಿಗಳ ಸಂಖ್ಯೆ 94 ಕ್ಕೆ ತಲುಪಿದ್ದು, 21 ಜನ ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಲಸೆ ಕಾರ್ವಿುಕರಿಗೆ ಸಹಾಯವಾಣಿ
ಕಾರವಾರ:
ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಿಲುಕಿರುವ ಹೊರರಾಜ್ಯಗಳ ವಲಸೆ ಕಾರ್ವಿುಕರ ಅನುಕೂಲಕ್ಕಾಗಿ ಸಹಾಯವಾಣಿ ಹಾಗೂ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ಅವರು ತಿಳಿಸಿದ್ದಾರೆ.

ಹೊರರಾಜ್ಯಗಳ ವಲಸೆ ಕಾರ್ವಿುಕರು ನೋಂದಣಿಗಾಗಿ ಸಂಬಂಧ ತಹಸೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ಕುಮಟಾ ತಾಲೂಕಿನ ಹೆಗಡೆ ಹಾಸ್ಟೆಲ್ ಹಾಗೂ ಶಿರಸಿ ತಾಲೂಕಿನ ಕಲ್ಲಿಯಲ್ಲಿರು ಮುರಾರ್ಜಿ ವಸತಿ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರ ನಡೆಯಲಿದ್ದು, ಆಯಾ ಉಪವಿಭಾಗಾಧಿಕಾರಿಗಳು ನೇತೃತ್ವ ವಹಿಸುವರು. ಅಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟೋಪಚಾರ, ಶುದ್ದ ಕುಡಿಯುವ ನೀರು, ಶೌಚಗೃಹ, ವೈದ್ಯಕೀಯ ತಪಾಸಣೆ ಹಾಗೂ ಕೇಬಲ್ ಸಂಪರ್ಕದೊಂದಿಗೆ ಟಿವಿ ವೀಕ್ಷಣೆಗೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆಗಳು:
ಕಾರವಾರ -08382-226361, ಅಂಕೋಲಾ-08388 -230243, ಕುಮಟಾ-08386-222054, ಹೊನ್ನಾವರ-08387-220262, ಭಟ್ಕಳ -08385-226422, ಶಿರಸಿ -08384-226383, ಸಿದ್ದಾಪುರ -08389230127, ಯಲ್ಲಾಪುರ-08419-261129,ಮುಂಡಗೋಡ -08301-222122, ಹಳಿಯಾಳ-08284-220134, ಜೊಯಿಡಾ-08383-282723,ದಾಂಡೇಲ-08284-231482 ಸಂರ್ಪಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net