ದೋಸೆ ತಿಂದ 18 ವಿದ್ಯಾರ್ಥಿಗಳು ಅಸ್ವಸ್ಥ

dose
Published on

ಹಳಸಿದ ಅನ್ನದಿಂದ ತಿಂಡಿ ತಯಾರಿಸಿದ ಆರೋಪ
ಅಮ್ಮನಲ್ಲೂರು ಗ್ರಾಮದ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಘಟನೆ



ಚಿಂತಾಮಣಿ: ಬೆಳಗ್ಗೆ ತಿಂಡಿಗೆ ನೀಡಿದ ದೋಸೆ, ಚಟ್ನಿ ಸೇವಿಸಿದ 18 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿರುವ ಘಟನೆ ಚಿಂತಾಮಣಿ-ಬೆಂಗಳೂರು ರಸ್ತೆಗೆ ಹೊಂದಿಕೊಂಡಿರುವ ಕೋಲಾರ ತಾಲೂಕಿಗೆ ಸೇರಿದ ಅಮ್ಮನಲ್ಲೂರು ಗ್ರಾಮದ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಅಸ್ವಸ್ಥಗೊಂಡಿರುವವರ ಪೈಕಿ 13 ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಮತ್ತು 5 ಮಂದಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.


ಚಿಂತಾಮಣಿ ತಾಲೂಕಿನ ಜೋಡಿ ಹೊಸಹಳ್ಳಿಯ ಗೌತಮ್, ವೈಜಕೂರು ಗ್ರಾಮದ ವೇಘನಂದನ, ಹೊಸೂರು ಗ್ರಾಮದ ಎಚ್. ಮದನ್ ಮತ್ತು ವಿಕ್ರಂ, ತಳಗವಾರ ಗ್ರಾಮದ ಮದನ್ ಹಾಗೂ ಸುಜನ್, ಅರವಿಂದ್, ಕಿಶೋರ್, ರಂಜಿತ್, ಕೋಮಲ್ ಕುವಾರ್, ಮದನ್ ಕುವಾರ್, ಮೋಹಿತ್, ಅಂಬರೀಶ್, ಅಜಯ್ ಕುವಾರ್, ವಿವೇಕ್, ಸುದಾನಂದ, ಸಾಯಿಚರಣ್, ಗಗನ್ ಅಸ್ವಸ್ಥಗೊಂಡಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಒಟ್ಟು 54 ಮಕ್ಕಳಿದ್ದು, ಎಲ್ಲರೂ ಶ್ರೀಚೌಡೇಶ್ವರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು. ವಸತಿ ನಿಲಯದಲ್ಲಿ ದಿನಕ್ಕೊಂದು ಉಪಾಹಾರ ನೀಡಲಾಗುತ್ತಿದೆ. ಎಂದಿನಂತೆ ಶುಕ್ರವಾರ ಮಕ್ಕಳಿಗೆ ಬೆಳಗಿನ ತಿಂಡಿಗೆ ದೋಸೆ, ಚಟ್ನಿ ನೀಡಲಾಗಿದೆ. ಇದನ್ನು ಸೇವಿಸಿ ತರಗತಿಗೆ ತೆರಳಿದ್ದ 18 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಶಾಲೆ ಪ್ರಾರಂಭವಾಗುವ ಮುನ್ನ ಮೈದಾನದಲ್ಲಿ ಆಟವಾಡುತ್ತಿದ್ದ ಕೆಲ ವಿದ್ಯಾರ್ಥಿಗಳು ಇದ್ದಕ್ಕಿಂದ್ದಂತೆ ವಾಂತಿ ಮಾಡಿಕೊಂಡಿದ್ದಾರೆ. ಆ ಪೈಕಿ 5 ಮಂದಿಗೆ ವಾಂತಿ-ಭೇದಿ ಜತೆಗೆ ಜ್ವರವೂ ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದ ಶಾಲೆಯ ಶಿಕ್ಷಕರು ಹಾಗೂ ಅಡುಗೆ ಸಹಾಯಕರು ಮಕ್ಕಳನ್ನು ಕೂಡಲೇ ವಿದ್ಯಾರ್ಥಿನಿಲಯದ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ತೀವ್ರ ಅಸ್ವಸ್ಥಗೊಂಡಿದ್ದ ವಿಕ್ರಮ್, ಗೌತಮ್, ಮದನ್, ಮದನ್ ಕುವಾರ್ ಹಾಗೂ ಮೇಘನಂದನ ಸೇರಿ ಒಟ್ಟು 5 ಮಕ್ಕಳನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲು ವಾಡಿದ್ದಾರೆ.

ರಾತ್ರಿ ಮಿಕ್ಕಿದ್ದ ಅನ್ನದಿಂದ ದೋಸೆ: ಚಿಕಿತ್ಸೆ ಪಡೆಯತ್ತಿರುವ ವಿದ್ಯಾರ್ಥಿ ಮೇಘನಂದನ ಮಾತನಾಡಿ, ಗುರುವಾರ ರಾತ್ರಿ ಮಿಕ್ಕಿದ್ದ ಅನ್ನದಿಂದಲೇ ಶುಕ್ರವಾರ ಬೆಳಗ್ಗೆ ದೋಸೆ ಮಾಡಿದ್ದರು. ಅದನ್ನು ತಿಂದ ನಂತರ 18 ವಿದ್ಯಾರ್ಥಿಗಳಿಗೆ ವಾಂತಿಯಾಯಿತು. ತಕ್ಷಣ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ, ನಮ್ಮನ್ನು ಚಿಂತಾಮಣಿಗೆ ಕರೆ ತಂದರು ಎಂದು ತಿಳಿಸಿದ್ದಾನೆ.

ಆರೋಗ್ಯದಲ್ಲಿ ಚೇತರಿಕೆ: ಚಿಂತಾಮಣಿ ಮತ್ತು ಅಮನಲ್ಲೂರು ಗ್ರಾಮಕ್ಕೆ ಸವಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ವೇಮಗಲ್ ಠಾಣೆ ಪೊಲೀಸರು, ಕೋಲಾರ ತಹಸೀಲ್ದಾರ್ ಡಾ.ನಯನಾ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 54 ವಿದ್ಯಾರ್ಥಿಗಳಿದ್ದು, ಇಬ್ಬರು ಅಡುಗೆ, ಒಬ್ಬರು ಅಡುಗೆ ಸಹಾಯಕ ಹಾಗೂ ರಾತ್ರಿ ಕಾವಲುಗಾರ ಇದ್ದಾರೆ. ಒಬ್ಬ ಅಡುಗೆ ಸಹಾಯಕ ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ ಎಂಬ ದೂರುಗಳು ಬಂದಿವೆ. ಶಿಸ್ತುಕ್ರಮಕ್ಕೆ ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಅಸ್ವಸ್ಥಗೊಂಡಿದ್ದ ಮಕ್ಕಳೆಲ್ಲ ಈಗ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ತೊಂದರೆಯಿಲ್ಲ ಎಂದು ಸವಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net