ಚಿಕ್ಕಬಳ್ಳಾಪುರ : ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕ ಪ್ರಶಸ್ತಿಯನ್ನು ೋಷಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಇನಮಿಂಚೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸುಶೀಲಮ್ಮ ಮತ್ತು ಗುಡಿಬಂಡೆ ತಾಲೂಕಿನ ಹಂಪಸಂದ್ರದ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಹರೀಶ್‌ರಾಜ ಅರಸ್ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯಮಟ್ಟದ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ಆಯ್ಕೆ ಮಾಡಿದ್ದು ಇದರಲ್ಲಿ ಜಿಲ್ಲೆಯ ಇಬ್ಬರು ಶಿಕ್ಷಕರು ಸೇರಿದ್ದಾರೆ. ಮಹಿಳಾ ಶಿಕ್ಷಕಿಯರಿಗೆ ಅಕ್ಷರಮಾತೆ ಸಾವಿತ್ರಿಬಾಯಿ ುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ತಾಲೂಕುವಾರು ತಲಾ ಒಬ್ಬರು ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ರಫೀಕ್ ಅಹಮದ್ (ಕೊತ್ತಪಲ್ಲಿ), ಟಿ.ಸಿ.ಗೋವಿಂದರಾಜ್ ಯಾದವ್ (ಪುಟ್ಟತಿಮ್ಮನಹಳ್ಳಿ), ಎಸ್.ಹರೀಶ್ ಕುಮಾರ್ (ಎಲೆಹಳ್ಳಿ), ಡಿ.ಎ.ಲಕ್ಷ್ಮೀನಾರಾಯಣ (ವೈ.ಕುರುಪ್ಪಲ್ಲಿ), ಎನ್.ಲಕ್ಷ್ಮೀದೇವಮ್ಮ(ಬಂದಾರ್ಲಹಳ್ಳಿ), ಎಂ.ರಾಮಕೃಷ್ಣಪ್ಪ (ಅತ್ತಿಗಾನಹಳ್ಳಿ).
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಎನ್.ಸರಸ್ವತಮ್ಮ(ಚೇಳೂರು), ಕೆ.ಎಸ್.ಕಸ್ತೂರಿ(ಹಳೇ ಪೆರೇಸಂದ್ರ), ವಿ.ಪದ್ಮ (ನೆಕ್ಕುಂದಿಪೇಟೆ), ಎನ್.ಜಯಪ್ರಕಾಶ್ (ನಕ್ಕಲಹಳ್ಳಿ), ಆರ್.ಗಂಗಾಧರಪ್ಪ (ಚೌಟಕುಂಟಹಳ್ಳಿ), ವಿ.ಎಂ.ಮಂಜುನಾಥ್ (ಗೌಡನಹಳ್ಳಿ).
ಪ್ರೌಢಶಾಲಾ ವಿಭಾಗ: ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಬಿ.ಎಂ.ಪ್ರಮೀಳಾ (ದೇವರಗುಡಿಪಲ್ಲಿಯ ಆದರ್ಶ ವಿದ್ಯಾಲಯ), ಎಂ.ವಿ. ಅನುಪಮಾ (ಆವಲಗುರ್ಕಿ), ಅಶ್ವತ್ಥರೆಡ್ಡಿ (ಟಿ.ಗೊಲ್ಲಹಳ್ಳಿಯ ಟಿಕೆಜಿಎಂ ಅನುದಾನಿತ ಪ್ರೌಢಶಾಲೆ), ಎನ್.ನಾಗರಾಜು (ನಕ್ಕಲಹಳ್ಳಿ), ಕೆ.ಸಿ.ಮಂಜುನಾಥ್ (ಬೀಚಗಾನಹಳ್ಳಿ) ಮತ್ತು ಸಿ.ಪ್ರಶಾಂತ್ ಕುಮಾರ್ (ಕುಂದಲಗುರ್ಕಿ).