176 ಜನರಿಗೆ ಕರೊನಾ ಸೋಂಕು ಖಚಿತ

carona logo
Published on

ಕಾರವಾರ: ಜಿಲ್ಲೆಯಲ್ಲಿ ಸೋಮವಾರ 176 ಜನರಿಗೆ ಕರೊನಾ ಸೋಂಕು ಖಚಿತವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 9213ಕ್ಕೆ ಏರಿಕೆಯಾಗಿದೆ. 43 ಜನ ಗುಣ ಹೊಂದಿದ್ದು, ಒಟ್ಟಾರೆ ಗುಣವಾದವರ ಸಂಖ್ಯೆ 6707 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ 2395 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಸಾವನ್ನಪ್ಪಿದ್ದಾರೆ. ಕೋವಿಡ್​ನಿಂದ ಮೃತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಕ್ರಿಮ್್ಸ ಐಸಿಯುನಲ್ಲಿ 26 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, 14 ಜನ ಆಸ್ಪತ್ರೆಯಲ್ಲಿದ್ದಾರೆ.

ಎರಡು ಯಂತ್ರ: ಕ್ರಿಮ್್ಸ ಆಸ್ಪತ್ರೆಗೆ ಮತ್ತೊಂದು ಆರ್​ಟಿ-ಪಿಸಿಆರ್ ಯಂತ್ರ ಬಂದಿದೆ. ಸದ್ಯ ದಿನಕ್ಕೆ 700ಕ್ಕೂ ಅಧಿಕ ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net