17 ಜನ ಕಾಂಗ್ರೆಸ್‌ನಿಂದ ಉಚ್ಛಾಟನೆ, ಮುಖಂಡರಿಗೆ ಆರು ವರ್ಷ ಸಜೆ

congress logo
Published on

ಬಳ್ಳಾರಿ: ಮಾಜಿ ಶಾಸಕ, ಬಳ್ಳಾರಿ ನಗರ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ಅನಿಲ್ ಲಾಡ್ ಸೇರಿ 17 ಜನ ಕಾಂಗ್ರೆಸ್ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ದೇಶನದ ಮೇರೆಗೆ ಪಕ್ಷದಿಂದ ಆರು ವರ್ಷಗಳ ವರೆಗೆ ಉಚ್ಛಾಟಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್ ಮಹಮ್ಮದ್ ತಿಳಿಸಿದ್ದಾರೆ.

ಅರ್ಷದ್ ಅಹಮದ್ ಗನಿ (ಬ್ರೂಸ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ), ಕೆ.ಬಿ.ಅಂಜನಿ (ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ), ಲಕ್ಷ್ಮಣ (ಕಾರ್ಮಿಕ ವಿಭಾಗ ), ಜಿ.ವೆಂಕಟರಮಣ (ಮಾಜಿ ಮೇಯರ್), ಎಂ.ಕುಮಾರಮ್ಮ (ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ), ಪರ್ವೀನ್ ಬಾನು (ಪಾಲಿಕೆ ಮಾಜಿ ಸದಸ್ಯೆ), ವಿ.ಎಸ್.ಮರಿದೇವಯ್ಯ (ಪಾಲಿಕೆ ಮಾಜಿ ಸದಸ್ಯ),

ಶಾಷಬ್ (ಪಾಲಿಕೆ ಮಾಜಿ ಸದಸ್ಯ), ರಾಮುಡು (ಪಾಲಿಕೆ ಮಾಜಿ ಉಪ ಮೇಯರ್),ದಾಕಾಯಿಣಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ), ಮುಖಂಡರಾದ ಮಾರುತಿ ವರಪ್ರಸಾದ್, ಶೇಕಮ್ಮ, ಫಾತೀಮಾ ಬೀಬಿ, ಶಾಂತಮ್ಮ, ಲಕ್ಷ್ಮೀ, ಲಕ್ಷ್ಮಿದಾಸ್ ಉಚ್ಛಾಟಿತರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net