

ವಿಜಯಪುರ : ಮಹಾನಗರ ಪಾಲಿಕೆ ಚುನಾವಣೆ ಮತದಾನಕ್ಕೆ ದಿನಾಗಣನೆ ಆರಂಭಗೊಂಡ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಆಘಾತ ಉಂಟಾಗಿದೆ. ಮಾಜಿ ಮೇಯರ್ ಸೇರಿದಂತೆ 14 ಜನ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಪರಿಣಾಮ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಉಚ್ಛಾಟಿಸಿ ಆದೇಶಿಸಿದ್ದಾರೆ.
ಭಾರತಿ ಭುಯ್ಯಾರ (ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಹಿಳಾ ಮೋರ್ಚಾ), ಅಲ್ತಾಫ ಹಮೀದಸಾಬ ಇಟಗಿ (ಅಧ್ಯಕ್ಷರು, ಅಲ್ಪಸಂಖ್ಯಾತರ ಮೋರ್ಚಾ ನಗರ ಮಂಡಲ), ಬಾಬು ವೇಣು ಜಾಧವ (ಜಿಲ್ಲಾ ಉಪಾಧ್ಯಕ್ಷ, ಪರಿಶಿಷ್ಟ ಜಾತಿ ಮೋರ್ಚಾ), ಬಾಬು ಶಿರಶ್ಯಾಡ (ಬಿಜೆಪಿ ವಿಶೇಷ ಆಹ್ವಾನಿತರು), ಅಶೋಕ ನ್ಯಾಮಗೊಂಡ (ಸಂಚಾಲಕ, ಸಹಕಾರಿ ಪ್ರಕೋಷ್ಠ ನಗರ ಮಂಡಲ), ಚಿನ್ನಪ್ಪ ಚಿನಗುಂಡಿ (ಉಪಾಧ್ಯಕ್ಷ, ನಗರ ಹಿಂದುಳಿದ ವರ್ಗಗಖ ಮೋರ್ಚಾ), ಬಸವರಾಜ ಗೊಳಸಂಗಿ (ಕಾರ್ಯದರ್ಶಿ, ನಗರ ಮಂಡಲ), ಅಭಿಷೇಕ ಸಾವಂತ (ಅಧ್ಯಕ್ಷ, ಎಸ್.ಟಿ ಮೋರ್ಚಾ ನಗರ ಮಂಡಲ), ಬಾಬು ಏಳಗಂಟಿ (ಸಂಚಾಲಕ, ಕೈಗಾರಿಕಾ ಪ್ರಕೋಷ್ಠ ನಗರ ಮಂಡಲ), ರವಿ ಬಗಲಿ (ಕಾರ್ಯದರ್ಶಿ, ರಾಜ್ಯ ರೈತ ಮೋರ್ಚಾ), ಬಸಪ್ಪ ಸಿದ್ದಪ್ಪ ಹಳ್ಳಿ (ಬಿಜೆಪಿ ಕಾರ್ಯಕರ್ತ), ಸವಿತಾ ಪಾಟೀಲ (ಬಿಜೆಪಿ ಕಾರ್ಯಕರ್ತೆ), ಸಂಗೀತಾ ಪೋಳ (ಮಾಜಿ ಮೇಯರ್), ರಾಜು ಬಿರಾದಾರ (ಜಿಲ್ಲಾ ಸಹ ಸಂಚಾಲಕ, ಗ್ರಾಮೀಣ ಪಂಚಾಯತ್‌ರಾಜ್ ಪ್ರಕೋಷ್ಠ).
ಪಕ್ಷದ ನಿರ್ಧಾರಗಳನ್ನು ಧಿಕ್ಕರಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 14 ಜನರನ್ನು ಮುಂದಿನ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.