ನನಗೆ ಗೊತ್ತಿಲ್ಲದೆ ೧೭ ಕೋಟಿ ರೂ. ಮಂಜೂರು : ಪೂಜೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ

BR Patil
Published on

ಸಭಾಪತಿಗೆ ಹಕ್ಕುಚ್ಯುತಿ ನೋಟಿಸ್ ನೀಡಿರುವುದಾಗಿ ಹೇಳಿದ ಪಾಟೀಲ್

ಕಲಬುರಗಿ: ಆಳಂದ ವಿಧಾನಸಭೆ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಇಲಾಖೆಯಿಂದ ೧೭ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ನನೆಗೆ ಗೊತ್ತಿಲ್ಲ. ಮೌಲಾನಾ ಆಜಾದ ವಸತಿ ಶಾಲೆ ನಿರ್ಮಾಣಕ್ಕೆ ನನಗೆ ಗುದ್ದಲಿ ಪೂಜೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಸಿದ್ದಾರೆ. ಮೊದಲೇ ತಿಳಿಸಿದರೆ ನಾನು ಕೆಕೆಆರ್‌ಡಿಬಿ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುತ್ತಿದೆ. ಹೀಗೆ ಹೇಳದೇ ಕೇಳದೆ ಹಣ ಬಿಡುಗಡೆ ಮಾಡಿದರೆ ಡುಪ್ಲಿಕೇಷನ್ ಆಗುತ್ತದೆ. ಸರ್ಕಾರದ ಹಣ ವ್ಯರ್ಥವಾಗುತ್ತದೆ ಎಂದು ಶಾಸಕ ಬಿ.ಆರ್.ಪಾಟೀಲ್ ಅಸಮಧಾನ ವ್ಯಕ್ತಪಡಿಸಿದರು. ನಾನು ಕೆಕೆಆರ್‌ಡಿಬಿಯಿಂದ ಮೌಲನಾ ಅಬುಲ್ ಕಲಾಂ ಶಾಲೆ ಕಟ್ಟುತ್ತಿz್ದೆÃನೆ. ಅಲ್ಪಸಂಖ್ಯಾತ ಇಲಾಖೆಯಿಂದ ಪುನಃ ಹಣ ಮಂಜೂರು ಮಾಡಿಸಿದ್ದಾರೆ. ನಾನು ಶಾಸಕನಾಗಿ ಬೇಡಿಕೆಯೂ ಮಂಡಿಸಿಲ್ಲ. ಇವರು ಏಕೆ ನೀಡಿದ್ದಾರೆ. ನನಗೆ ಹೇಳದೇ ಕಾಮಗಾರಿ ಮಾಡುತ್ತಿರುವುದರಿಂದ ಹಕ್ಕುಚ್ಯುತಿ ನೋಟಿಸ್ ನೀಡುವಂತೆ ಸಭಾಪತಿಗಳಿಗೆ ಪತ್ರ ಬರೆದಿz್ದÉÃನೆ ಎಂದು ತಿಳಿಸಿದರು.

ನಾನು ಯಾವ ಸಚಿವರ ಹೆಸರು ಹೇಳಿಲ್ಲ. ಯಾರ ಬಗ್ಗೆಯೂ ಆರೋಪ ಮಾಡಿಲ್ಲ. ಗೋಲ್ ಮಾಲ್ ಅಲ್ಲ. ನಾನು ಹೇಳಿದ್ದೆಲ್ಲವು ನಿಜ.ಬೇಕಿದ್ದರೆ ತನಿಖೆ ಮಾಡಿಸಲಿ.ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದು.ಅಲ್ಪಸಂಖ್ಯಾತರ ಇಲಾಖೆಯಿಂದ ಕಾಮಗಾರಿ ಶುರುವಾಗಿದೆ. ಶಿಷ್ಟಾಚಾರ ಉಲ್ಲಂಘನೆಯಾಗಿದೆ.

| ಬಿ.ಆರ್.ಪಾಟೀಲ್ ಆಳಂದ ಶಾಸಕ

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net