

ಕಲಬುರಗಿ: ಶೃಂಗೇರಿ ಶ್ರೀ ಶಾರದಾ ಪೀಠ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ನಗರದಲ್ಲಿ ಮಾ.೧೬ರಿಂದ ಮೂರು ದಿನ ವಿಜಯಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಪೀಠದ ಜಿಲ್ಲಾ ವಿಶೇಷ ಪ್ರತಿನಿಧಿ ಪ್ರಕಾಶ ಕುಲಕರ್ಣಿ ಹೇಳಿದರು.
೧೬ರ ಸಂಜೆ ೫.೩೦ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಎನ್‌ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾ ಮಂಟಪವರೆಗೆ ಮಂಗಳವಾದ್ಯಗಳೊAದಿಗೆ ಪೂರ್ಣಕುಂಭ ಸ್ವಾಗತ, ಭವ್ಯ ಶೋಭಾಯಾತ್ರೆ ನಡೆಯಲಿದೆ. ೬.೩೦ಕ್ಕೆ ಧೂಳಿ ಪಾದಪೂಜೆ, ವೇದಘೋಷ, ಪ್ರಾರ್ಥನೆ, ಫಲಸಮರ್ಪಣೆ, ಕಲಬುರಗಿ ನಾಗರಿಕರಿಂದ ಶ್ರೀಗಳಿಗೆ ಪೌರಸನ್ಮಾನ, ಭಿನ್ನವತ್ತಳಿಕೆ ಸಮರ್ಪಣೆ ನಂತರ ಆಶೀರ್ವಚನ, ರಾತ್ರಿ ೮.೩೦ಕ್ಕೆ ಎನ್‌ವಿ ದತ್ತಾತ್ರೇಯ ಹೆರೂರ್ ರಂಗಮAದಿರದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಇರಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೭ರಂದು ನಗರದ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ಭಕ್ತಾದಿಗಳಿಂದ ಪಾದಪೂಜೆ, ಭಿಕ್ಷಾವಂದನೆ, ವಸ್ತçಕಾಣಿಕೆ, ಫಲಸಮರ್ಪಣೆ, ಮಧ್ಯಾಹ್ನ ೨ಕ್ಕೆ ಯಾಜ್ಞವಲ್ಕÈ ಸಭಾಭವನದಲ್ಲಿ ಮಹಾಪ್ರಸಾದ, ಸಂಜೆ ೬ಕ್ಕೆ ನೂತನ ವಿದ್ಯಾಲಯ ಆವರಣದಲ್ಲಿ ಜಿಲ್ಲೆಯ ಭಕ್ತರಿಂದ ಕಲ್ಯಾಣವೃಷ್ಟಿಸ್ತವ ಪಾರಾಯಣ, ಜಗದ್ಗುರುಗಳ ಆಶೀರ್ವಚನ ಹಾಗೂ ರಾತ್ರಿ ೯ಕ್ಕೆ ಸಂಗಮೇಶ್ವರ ಕಾಲನಿ ಶಂಕರ ಮಠದಲ್ಲಿ ಶ್ರೀಗಳಿಂದ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ ಎಂದು ಹೇಳಿದರು.
೧೮ರಂದು ಬೆಳಗ್ಗೆ ೯ಕ್ಕೆ ಜಗದ್ಗುರುಗಳ ದರ್ಶನ, ಮಂತ್ರಾಕ್ಷತೆ, ಭಕ್ತರಿಂದ ಪಾದಪೂಜೆ, ಭಿಕ್ಷಾವಂದನೆ, ವಸ್ತçಕಾಣಿಕೆ, ಸಂಜೆ ಶ್ರೀಗಳ ಬೀಳ್ಕೊಡುಗೆ ನಡೆಯಲಿದೆ. ಸುಮಾರು ೧೨೦೦ ವರ್ಷ ಪೂರ್ವ ಜಗದ್ಗುರು ಶಂಕರಾಚಾರ್ಯರು ಭಾರತ ದೇಶವನ್ನು ಕಾಲ್ನಡಿಗೆಯಿಂದ ಸುತ್ತಾಡಿ ಭಾರತೀಯರನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಒಂದುಗೂಡಿಸಲು ಪ್ರಯತ್ನಿಸಿ ಭರತ ಖಂಡ ಮತ್ತು ಸನಾತನ ಧರ್ಮ ಭಕ್ತರನ್ನು ಒಂದುಗೂಡಿಸಿ ಅದರ ಮಹತ್ವ ತಿಳಿಸಿದ್ದರು ಎಂದರು.
ಧಾರ್ಮಿಕ, ಸಾಂಸ್ಕೃತಿಕ, ಏಕತೆಗಾಗಿ ಭಾರತದಲ್ಲಿ ನಾಲ್ಕು ಆಮ್ನಾಯ ಸ್ಥಾಪಿಸಿದರು. ಶೃಂಗೇರಿ ಶಾರದಾ ಪೀಠಕ್ಕೆ ಈವರೆಗೆ ೩೫ ಪೀಠಾಧಿಪತಿಗಳಾಗಿದ್ದು, ೩೬ನೇ ಪೀಠಾಧಿಪತಿ ಶ್ರೀ ವಿಧುಶೇಖರ ಭಾರತೀ ತೀರ್ಥರು ನಗರದಲ್ಲಿ ಕೈಗೊಂಡಿರುವ ಮೂರು ದಿನದ ವಿಜಯಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವಿಶ್ವ ಹಿಂದು ಪರಿಷತ್‌ನ ಶಿವರಾಜ ಸಂಗೋಳಗಿ, ಪಿ.ಆರ್. ಕುಲಕರ್ಣಿ, ರಾಜು ನವಲದಿ, ಶಾಮರಾವ ಕುಲಕರ್ಣಿ, ಪ್ರಶಾಂತ ಗುಡ್ಡಾ, ಹೃಷಿಕೇಶ ಚೌಡಾಪುರಕರ್, ಗೋಪಾಲಕೃಷ್ಣ ಸರಡಗಿ ಇತರರಿದ್ದರು.