

ಬೆಂಗಳೂರು: ಬಗೆದಷ್ಟೂ ಆಳ ಎಂಬಂತಾಗುತ್ತಿದೆ ಡ್ರಗ್ಸ್ ಮಾಫಿಯಾ. ಮಾದಕ ಜಾಲವನ್ನು ಬುಡಸಮೇತ ಕಿತ್ತೊಗೆಯಲು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿರುವ ಪೊಲೀಸರು ಡ್ರಗ್ಸ್ ಪೆಡ್ಲರ್ಗಳ ಬಂಧನಕ್ಕೆ ಬಲೆ ಬೀಸಿದ್ದು, ಮತ್ತಿಬ್ಬರು 165 ಕೆಜಿ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾರೆ.
ಜನನಿಬಿಡ ಪ್ರದೇಶದಲ್ಲೇ ರಾಜಾರೋಷವಾಗಿ ದೇವಸ್ಥಾನದ ಬಳಿಯೇ ಒಂದು ಕಾರಿನಿಂದ ಮತ್ತೊಂದು ಕಾರಿಗೆ ಗಾಂಜಾ ತುಂಬುತ್ತಿದ್ದ ಕೋರಮಂಗಲ ನಿವಾಸಿ ವಿಶ್ವಾಸ್ ಮತ್ತು ಮಾಲೂರು ತಾಲೂಕಿನ ಅಂಬರೀಶ್ನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹುಸ್ಕೂರು ರಸ್ತೆಯ ದೇವಸ್ಥಾನವೊಂದರ ಬಳಿಯೇ ಗಾಂಜಾ ಸರಬರಾಜು ಮಾಡುತ್ತಿದ್ದರು. ಇದನ್ನೂ ಓದಿರಿ ಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!
ಗಾಂಜಾವನ್ನು ಸಣ್ಣ-ಸಣ್ಣ ಪೊಟ್ಟಣ ಕಟ್ಟಿ ಒಂದು ಪೊಟ್ಟಣಕ್ಕೆ 500 ರೂಪಾಯಿಯಂತೆ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಮಡಿವಾಳ, ಕೋರಮಂಗಲ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.