16 ಲಕ್ಷ ಮೌಲ್ಯದ ಬಿಯರ್ ನಾಶ

7-hvr-07
Published on

ಹಾವೇರಿ: ನಗರದಲ್ಲಿರುವ ಕೆಎಸ್​ಬಿಸಿಎಲ್ ಡಿಪೋದಲ್ಲಿ ಸೇವನೆಗೆ ಅನುಪಯುಕ್ತ ಹಾಗೂ ಮಾರಾಟವಾಗದೇ ಅವಧಿ ಮೀರಿ ಉಳಿದ 16 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್​ಗಳು ಬಿಯರ್ ದಾಸ್ತಾನನ್ನು ಶನಿವಾರ ನಾಶಪಡಿಸಲಾಯಿತು.

ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ 1,187 ಬಾಕ್ಸ್​ಗೂ ಹೆಚ್ಚು ಬಿಯರ್ ಬಾಟಲಿಗಳನ್ನು ನಾಶಪಡಿಸಲಾಯಿತು. ವೈಜ್ಞಾನಿಕವಾಗಿ 6ಅಡಿ ಆಳದ ಗುಂಡಿಯಲ್ಲಿ ಬಾಟಲಿಗಳಲ್ಲಿದ್ದ ಬಿಯರ್​ನ್ನು ಸುರಿದು ಗುಂಡಿ ಮುಚ್ಚಲಾಯಿತು.

ಕಾರ್ಯಾಚರಣೆಯಲ್ಲಿ ಹಾವೇರಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ, ಕೆಎಸ್​ಬಿಸಿಎಲ್ ಡಿಪೋ ವ್ಯವಸ್ಥಾಪಕ ಚಂದ್ರಶೇಖರ ಬುಲ್​ಬುಲೆ, ಸಿಬ್ಬಂದಿ ರಾಘವೇಂದ್ರ ಮಸಾಲಜಿ, ವಿರೂಪಾಕ್ಷಿ ದೊಡ್ಡಕುಂಬಾರ, ಕೆಎಸ್​ಬಿಸಿಎಲ್ ಡಿಪೋ ಅಬಕಾರಿ ನಿರೀಕ್ಷಕ ಸುನೀಲ್ ಸುಡಗಾಡದವರ, ಶ್ರೀಮತಿ ಜಿ.ಬಿ. ಕೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net