

ಕಲಬುರಗಿ : ಇಲ್ಲಿನ ದುಬೈ ಕಾಲನಿಯಲ್ಲಿ ಬಾಲಕರಿಬ್ಬರು ಮೃತಪಟ್ಟ ಅವಘಡಕ್ಕೆ ಕಾರಣವಾಗಿರುವ
ಈ ಟ್ಯಾಂಕ್ ಸುತ್ತ ತಡೆ ಬೇಲಿ ಹಾಕಿ ಸುರಕ್ಷತಾ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಮುಖಂಡ ಚಂದು ಪಾಟೀಲ್ ೧೫ ದಿನ ಹಿಂದೆಯೇ ಉಪ ಮೇಯರ್ ಶಿವಾನಂದ ಪಿಸ್ತಿ ಅವರಿಗೆ ಹೇಳಿದ್ದರು. ಅದರಂತೆ ಪಾಲಿಕೆ ಆಯುಕ್ತ ದೇವಿದಾಸ ಕೆಲದಿನ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ತುರ್ತು ಸ್ಪಂದನೆ ಮಾಡದಿರುವುದು ಮತ್ತು ಕಾಮಗಾರಿ ನಿರ್ವಹಿಸುತ್ತಿರುವ ಎಲ್ ಆ್ಯಂಡ್ ಟಿ ಕಂಪನಿ ನಿರ್ಲಕ್ಷÈದಿಂದ ಬಾಲಕರಿಬ್ಬರು ಬಲಿಯಾದಂತಾಗಿದೆ. ಇದಕ್ಕೆ ಪಾಲಿಕೆ ಹಾಗೂ ಕಂಪನಿ ಅಧಿಕಾರಿಗಳ ಮೈಮರೆವು ಕಾರಣ ಎಂದು ಚಂದು ಪಾಟೀಲ್ ಆರೋಪಿಸಿದರು.
ಕೋಟ್
ಬಾಲಕರು ಮೃತಪಟ್ಟಿರುವುದು ದುರದೃಷ್ಟಕರ. ಸುರಕ್ಷತಾ ಕ್ರಮ ಕೈಗೊಳ್ಳದೆ ಎಲ್ ಆ್ಯಂಡ್ ಟಿ ಕಂಪನಿ ನಿರ್ಲಕ್ಷÈ ವಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜತೆ ಮಾತನಾಡಿದ್ದು, ಮೃತರ ಕುಟುಂಬಕ್ಕೆ ಸಿಎಂ ನಿಧಿಯಿಂದ ಪರಿಹಾರ ಕೊಡಿಸಲು ಒಪ್ಪಿಗೆ ಸೂಚಿಸಿದ್ದಾರೆ. ಪಾಲಿಕೆ ಮತ್ತು ಎಲ್ ಆ್ಯಂಡ್ ಟಿ ಕಂಪನಿಯಿAದಲೂ ಪರಿಹಾರ ಕೊಡಿಸಲಾಗುವುದು. ಪಾಲಿಕೆ ಎಲ್ಲ ತಗ್ಗುಗಳ ಮೇಲೆ ನಿಗಾ ಇರಿಸಬೇಕು. ಎಲ್ಲಿಯೇ ತಗ್ಗು, ನೀರು ಸಂಗ್ರಹವಾಗುವ ಸ್ಥಳ ಕಂಡರೆ ತಕ್ಷಣ ಬೇಲಿ ನಿರ್ಮಿಸಬೇಕು.
| ಚಂದು ಪಾಟೀಲ್
ಬಿಜೆಪಿ ಯುವ ಮುಖಂಡ