ಶೀಘ್ರ 15 ಸಾವಿರ ಪೇದೆಗಳ ನೇಮಕ: ಗೃಹ ಸಚಿವ ಪರಮೇಶ್ವರ

KRT- DR.G.PARAMESHWAR- CONG
Published on

ತುಮಕೂರು: ಸದ್ಯದಲ್ಲೇ 15 ಸಾವಿರ ಪೇದೆಗಳ ನೇಮಕ ಮಾಡಲಿದ್ದು ಪಾರದರ್ಶಕ ನೇಮಕಾತಿಗೆ ಒತ್ತುಕೊಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಔರಾದ್ಕರ್ ವರದಿ ಜಾರಿ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ. 7ನೇ ವೇತನ ಆಯೋಗ ಜಾರಿ ಮಾಡಿದರೆ ಔರಾದ್ಕರ್ ವರದಿ ಪ್ರತ್ಯೇಕವಾಗಿ ಜಾರಿ ಮಾಡುವ ಅವಶ್ಯಕತೆ ಇಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಇನ್ನೂ ಪಿಎಸ್ಸೈ ನೇಮಕಾತಿ ಹಗರಣ ವಿಚಾರ ತನಿಖೆ ಕಾನೂನು ಪ್ರಕಾರ ನಡೀತಿದ್ದು 53 ಮಂದಿ ತಪ್ಪಿತಸ್ಥರು ಎಂದು ಕಂಡು ಬಂದಿದೆ. ಮರುಪರೀಕ್ಷೆ ಮಾಡದಂತೆ ಕೋರ್ಟ್ ತಡೆ ನೀಡಿದೆ. ಕಾನೂನು ತಜ್ಞರ ಸಲಹೆ ಪಡೆದು ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net