14ರಂದು ಪೌರಾಣಿಕ ನಾಟಕ ಪ್ರದರ್ಶನ

Published on

ಅರಕಲಗೂಡು: ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಏ.14ರಂದು ರಾತ್ರಿ ಜಗಜ್ಯೋತಿ ಬಸವೇಶ್ವರ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ವೇಲಾಪುರಿ ತಿಳಿಸಿದರು.

ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಭಕ್ತಿ ಭಂಡಾರಿ ಬಸವಣ್ಣ ಅವರ ಕುರಿತಾದ ಪೌರಾಣಿಕ ನಾಟಕವನ್ನು ಡಾ.ಅಂಬೇಡ್ಕರ್ ಸಾಂಸ್ಕೃತಿಕ ಮತ್ತು ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಡಾ.ಅಂಬೇಡ್ಕರ್ ಸಹ ಜಾತಿ ವ್ಯವಸ್ಥೆ ತೊಡೆದು ಹಾಕಲು ಬಸವಣ್ಣನವರ ಹಾದಿ ಹಿಡಿಯುತ್ತಾರೆ. ಹೀಗಾಗಿ ಬಸವಣ್ಣನವರ ಜೀವನ ಚರಿತ್ರೆಯನ್ನು ಶ್ರೀ ನರಸಿಂಹಶಾಸ್ತ್ರಿ ರಚಿಸಿದ್ದು ಇದನ್ನು ಆಯ್ಕೆ ಮಾಡಿಕೊಂಡು ಪೌರಾಣಿಕ ನಾಟಕ ಅಭಿನಯಿಸಲಾಗುವುದು. ಶಾಸಕ ಎ.ಮಂಜು, ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖಂಡ ಜಿ.ಜಿ. ರವಿ, ವಕೀಲ ಎಂ.ಕೆ. ದೇವರಾಜು, ರಂಗ ಕಲಾವಿದ ಕೇಶವ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net