148 ಜನರಿಗೆ ಕರೊನಾ ಖಚಿತ

carona logo
Published on

ಕಾರವಾರ: ಜಿಲ್ಲೆಯ 148 ಜನರಿಗೆ ಮಂಗಳವಾರ ಕರೊನಾ ಖಚಿತವಾಗಿದೆ. ಕಾರವಾರದಲ್ಲಿ 28, ಅಂಕೋಲಾದಲ್ಲಿ 14, ಕುಮಟಾದಲ್ಲಿ 7, ಹೊನ್ನಾವರದಲ್ಲಿ 17, ಭಟ್ಕಳದಲ್ಲಿ 11, ಶಿರಸಿಯಲ್ಲಿ 24, ಮುಂಡಗೋಡಿನಲ್ಲಿ 47 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕಾರವಾರ ಹಾಗೂ ಅಂಕೋಲಾದಲ್ಲಿ ತಲಾ 19, ಯಲ್ಲಾಪುರದಲ್ಲಿ 11, ಶಿರಸಿಯಲ್ಲಿ 1, ಹಳಿಯಾಳದಲ್ಲಿ 2, ಭಟ್ಕಳದಲ್ಲಿ 13, ಹೊನ್ನಾವರದಲ್ಲಿ 22, ಕುಮಟಾದಲ್ಲಿ 38 ಒಟ್ಟು 125 ಜನ ಗುಣವಾಗಿದ್ದಾರೆ. ಕುಮಟಾದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 12,218ಕ್ಕೆ ಏರಿಕೆಯಾಗಿದ್ದು, 10,837 ಜನ ಗುಣವಾಗಿದ್ದಾರೆ. 160 ಜನ ಮೃತಪಟ್ಟಿದ್ದು, 1,221 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net