ಆಟವಾಡುತ್ತ ಗೋಲಿ ನುಂಗಿ ಪ್ರಾಣ ಕಳೆದುಕೊಂಡಿತು 14 ತಿಂಗಳ ಮಗು...

Goli
Published on

ವಿಜಯನಗರ: ಚಿಕ್ಕ ಮಕ್ಕಳು ಮನೆಯಲ್ಲಿ ಸುಮ್ಮನೆ ಆಟವಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಡಿ. ಏಕೆಂದರೆ ಇಲ್ಲೊಂದು ಕಡೆ ಆಟವಾಡುತ್ತಿದ್ದ ಗೋಲಿಯೇ ಅದರ ಪ್ರಾಣಕ್ಕೆ ಮುಳುವಾಗಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಆಟವಾಡುವಾಗ ಗೋಲಿ ‌ನುಂಗಿ ಒಂದು ವರ್ಷ ಎರಡು ತಿಂಗಳ ಮನವೀರ್ ಎಂಬ ಮಗು ಪ್ರಾಣ ಕಳೆದುಕೊಂಡಿದೆ.

ಹರೀಶ್​ ಎಂಬವರ ಈ ಮಗು ಮನೆಯಂಗಳದಲ್ಲಿ ಆಟವಾಡುತ್ತ ಗೋಲಿಯನ್ನು ಬಾಯಿಗೆ ಹಾಕಿಕೊಂಡಿದೆ. ಆದರೆ ದುರದೃಷ್ಟವಶಾತ್ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ.

ಇದನ್ನು ಇನ್ನೊಬ್ಬ ಬಾಲಕ ಗಮನಕ್ಕೆ ತಂದಿದ್ದು, ಕೂಡಲೇ ಮಗುವನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಘಟನೆ ನಡೆದ ಹತ್ತು ಹದಿನೈದು ನಿಮಿಷಗಳಲ್ಲೇ ಅಂದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಮಗು ಉಸಿರುಗಟ್ಟಿ ಕೊನೆಯುಸಿರೆಳೆದಿದೆ. ಕಳೆದ ತಿಂಗಳ ಎರಡನೇ ತಾರೀಕಿನಂದು ಮಗುವಿನ ಮೊದಲ ಜನ್ಮದಿನವನ್ನು ಆಚರಣೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net