

ಮಂಗಳೂರು: ಕರಾವಳಿಯ ಆಳ ಸಮುದ್ರದಲ್ಲಿ ಬೋಟ್ ಮುಳುಗಿದ್ದು 14 ಮಂದಿ ಮೀನುಗಾರರು ನಾಪತ್ತೆ ಆಗಿದ್ದಾರೆ. ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಘಟನೆ ಸಂಭವಿಸಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಮಂಗಳೂರು ಬಂದರಿನಿಂದ ನೂರಾರು ಕಿಲೋಮೀಟರ್ ದೂರದ ಆಳ ಸಮುದ್ರದಲ್ಲಿ ಘಟನೆ ಸಂಭವಿಸಿದೆ.
ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ನಿಂದ ಹೊರಟಿದ್ದ ಮೀನುಗಾರಿಕಾ ಬೋಟ್ ಅಪಘಾತಕ್ಕೀಡಾಗಿದ್ದು, ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು. ಈ ಬೋಟ್ ಮೂಲಕ ಕೇರಳ-ಕರ್ನಾಟಕ ಸಮುದ್ರ ಗಡಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸಲಾಗುತ್ತಿತ್ತು. ಇದರ ಪತ್ತೆಗೆ ಇಂಡಿಯನ್ ಕೋಸ್ಟ್ ಗಾರ್ಡ್ನ ಮೂರು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.