137 ಪಾಸಿಟಿವ್, 154 ಜನರು ಗುಣ

carona logo
Published on

ಹಾವೇರಿ: ಆರೋಗ್ಯ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಶುಕ್ರವಾರ 137 ಜನರಿಗೆ ಕರೊನಾ ದೃಢಪಟ್ಟಿದೆ. 154 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 4,050 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 2,661 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 92 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,297 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 891 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 406 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ತಾಲೂಕುವಾರು ವಿವರ: ಶುಕ್ರವಾರ ಹಾವೇರಿ ತಾಲೂಕಿನಲ್ಲಿ 45, ಹಾನಗಲ್ಲ 25, ರಾಣೆಬೆನ್ನೂರ 21, ಹಿರೇಕೆರೂರ 18, ಶಿಗ್ಗಾಂವಿ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ತಲಾ 11, ಸವಣೂರ ತಾಲೂಕಿನಲ್ಲಿ 4 ಹಾಗೂ ಇತರೆ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರ 2, ಶಿಗ್ಗಾಂವಿ 3, ಸವಣೂರ 5, ಬ್ಯಾಡಗಿ 36 ಹಾಗೂ ಹಾವೇರಿ ತಾಲೂಕಿನ 108 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net