ಗೌರಿಬಿದನೂರು: ನಗರದ ನ್ಯಾಯಾಲಯ ಅವರಣದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆಂದು ಬಂದಿದ್ದ ಮೂರು ದಂಪತಿಗಳನ್ನು ರಾಜಿ ಸಂಧಾನದ ಮೂಲಕ ನ್ಯಾಯಾಧೀಶರು ಒಂದೂಗೂಡಿಸಿದರು.
ತಾಲೂಕು ಕಾನೂನು ಪ್ರಾಧಿಕಾರದಿಂದ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ಮಾತನಾಡಿ, ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಗಳಲ್ಲಿ ಮನಸ್ತಾಪ ಇದ್ದೇ ಇರುತ್ತದೆ. ಅದನ್ನು ದೊಡ್ಡದು ಮಾಡಿಕೊಂಡು ನ್ಯಾಯಾಲಯದ ಮೆಟ್ಟೆಲೇರುವುದು ಸರಿಯಲ್ಲ. ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಂಡರೆ ಬಾಳು ಸುಗಮವಾಗುತ್ತದೆ ಎಂದರು.
ನ್ಯಾಯಾಲಯದಲ್ಲಿ ಬ್ಯಾಂಕ್ ಸಿವಿಲ್ ಚೆಕ್ ಕೇಸ್, ಕುಟುಂಬ ಇನ್ನಿತರೆ ಪ್ರಕರಣಗಳು ಸೇರಿ ಸುಮಾರು 1789 ಪ್ರಕರಣಗಳು ಇತ್ಯಾರ್ಥಗೊಂಡವು. ಲೋಕಾದಾಲತ್‌ನಲ್ಲಿ 1.69 ಲಕ್ಷ ರೂ. ಸಂಗ್ರಹವಾಯಿತು.
ಪ್ರಧಾನ ನ್ಯಾಯಾಧೀಶ ಪಿ,ಎಂ,ಸಚಿನ್, ವಕೀಲರ ಸಂಘದ ಅಧ್ಯಕ್ಷ ದಿನೇಶ್, ಹಿರಿಯ ವಕೀಲ ಗೋಪಾಲ್, ಸಂದಾನಕಾರರಾದ ಹರೀಶ್, ಭಾರತಿ, ವಕೀಲರಾದ ಶ್ಯಾಮ್, ಹರ್ಷವರ್ಧನ್, ಎನ್.ಧನಂಜಯ್, ಜಗದೀಶ್, ಹಿರಿಯ ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿ ಇದ್ದರು.