

ಹುಣಸೂರು: ತಾಲೂಕು ಕಾಂಗ್ರೆಸ್‌ನ ವಿವಿಧ ಘಟಕಗಳ ನೂತನ ವರಿಷ್ಠರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅ.12ರಂದು ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಗರದ ಸಲೀಂ ಪ್ಯಾಲೇಸ್ ಕಲ್ಯಾಣ ಮಂಟಪ ಆವರಣದಲ್ಲಿ ಅ.12ರಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಟ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾಗಿರುವ ಹುಣಸೂರು ನಗರ, ಹುಣಸೂರು ಗ್ರಾಮಾಂತರ ಹಾಗೂ ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಮೂಲಕ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಒತ್ತು ನೀಡಬೇಕು ಎಂದರು.
ಪಕ್ಷದಿಂದ ವಿವಿಧ ಸಂಘ, ಸಂಸ್ಥೆಗಳಲ್ಲಿ ನಾಮನಿರ್ದೇಶಿತರಾಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲು ಪಕ್ಷವು ನಿರ್ದೇಶಿಸಿದೆ. ಪಕ್ಷದ ತತ್ವ, ಸಿದ್ಧಾಂತಗಳು, ಜನಪರ ಕಾರ್ಯಕ್ರಮಗಳನ್ನು ಜನರ ಬಳಿ ಕೊಂಡೊಯ್ಯುತ್ತಿರುವ ಕ್ರಿಯಾಶೀಲ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗುವುದು. ಸಂಟನೆ ಮತ್ತು ವಿಪಕ್ಷಗಳ ವೈಫಲ್ಯವನ್ನು ಮಾತಿನ ಮೂಲಕ ಮನೆಮನೆಗೆ ತಲುಪಿಸುವ ಕಾರ್ಯ ನಡೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ದುಡಿಯೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೆಪಿಸಿಸಿ ಉಸ್ತುವಾರಿ ರುದ್ರಪ್ಪ, ಸಂಸದ ಚಂದ್ರಶೇಖರ್, ತಾಲೂಕು ಉಸ್ತುವಾರಿ ರಾಮಪ್ಪ ಭೋವಿ, ನಗರಾಧ್ಯಕ್ಷ ಕಲ್ಕುಣಿಕೆ ರಮೇಶ್, ಕಾರ್ಯಾಧ್ಯಕ್ಷ ವಕೀಲ ಪುಟ್ಟರಾಜು, ಪಕ್ಷದ ಹಿರಿಯ ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಬಿ.ಎನ್. ಜಯರಾಮ್, ಗದ್ದಿಗೆ ದೇವರಾಜ್, ಬಾಲಸುಂದರ್, ಬಿಳಿಕೆರೆ ಪ್ರೇಮ್‌ಕುಮಾರ್, ರವಿ ಪ್ರಸನ್ನ, ಎಸ್.ಜಯರಾಮ್, ಬಿಳಿಕೆರೆ ಬಸವರಾಜ್ ಹೊನ್ನಪ್ಪ, ಕಲ್ಕುಣಿಕೆ ರಾಘು, ಕುಮಾರ್, ಚಿಕ್ಕಸ್ವಾಮಿ, ಅಜ್ಗರ್ ಪಾಷಾ, ಬಸವರಾಜಪ್ಪ, ಟಿ ಕೃಷ್ಣ, ವೀಣಾ, ಮಂಜುಳಾ, ಕಲ್ಪನಾ, ರೇಖಾ, ರೇಣುಕಾ, ರಾಜೇಂದ್ರಬಾಯಿ, ದರ್ಶನ್, ಫೈಸಾಲ್, ಲೋಕೇಶ್, ರವಿಕುಮಾರ್, ರಾಜು, ಮಹದೇವ್, ರಾಮೇಗೌಡ, ಮಹೇಶ ಮತ್ತಿತರರಿದ್ದರು.