ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

boy death
Published on

ಗುಬ್ಬಿ: ಶನಿವಾರ ಬೆಳಗ್ಗೆ ಮನೆಯಲ್ಲೇ ಆಟವಾಡಿಕೊಂಡಿದ್ದ 12 ವರ್ಷದ ಬಾಲಕ ಮಧ್ಯಾಹ್ನ ಅನುಮಾನಸ್ಪದವಾಗಿ ಸಮೀಪದ ಪೊದೆ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಾರನಳ್ಳಿಯ ಬಿಜೆಪಿ ಮುಖಂಡ ಶಂಕರೇಗೌಡರ ಪುತ್ರ ಉದಯ್ (12) ಮೃತ.

ಬಾಲಕ ಉದಯ್​ ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾನೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮೃತ ಬಾಲಕನ ದೇಹದ ಮೇಲೆ ಪ್ರಾಣಿ ದಾಳಿ ಮಾಡಿರುವ ಗುರುತು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಗೂಢ ಸಾವಿನ ಕಾರಣ ತಿಳಿಯಲಿದೆ. ಮಧ್ಯಾಹ್ನ ಬಾಲಕನು ಹೊಲಕ್ಕೆ ಹೋಗಿದ್ದ ಎನ್ನಲಾಗಿದೆ. ಸಿ.ಎಸ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net