ಬೆಂಗಳೂರು ದಕ್ಷಿಣ ಜಿಲ್ಲೆಗೆ ಮತ್ತೆ 12 ಕೆಪಿಎಸ್ ಶಾಲೆ

kokkarne kps
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೊಕ್ಕರ್ಣೆ.
Published on

* ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂ‘

* ಸರ್ಕಾರ ಹಸಿರು ನಿಶಾನೆ

ರಾಮನಗರ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಂಠಿತ ಹಿನ್ನೆಲೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂ‘ಕ್ಕೆ ಹೆಚ್ಚು ಒತ್ತುಕೊಡುತ್ತಿರುರುವ ರಾಜ್ಯ ಸರ್ಕಾರ ಜಿಲ್ಲೆಗೆ ಮತ್ತೆ 12 ಶಾಲೆಗಳ ಆರಂಭಕ್ಕೆ ಹಸಿರು ನಿಶಾನೆ ತೋರಿಸಿದೆ.

ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳಿಗೆ ಕಾರ್ಯ ಕಲ್ಪ ನೀಡುವ ಜತೆಗೆ ಉತ್ತಮ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಮಂಜೂರು ಮಾಡಿದ್ದು, ಜಿಲ್ಲೆಯ ನಾಲ್ಕು ವಿಧಾನ ಸಭೆ ಕ್ಷೇತ್ರಳಿಗೆ ಒಟ್ಟು 12 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿದ್ದು, 2026-27ನೇ ಶೈಕ್ಷಣಿಕ ವರ್ಷದಿಂದ ಈ ತರಗತಿಗಳು ಆರಂಭಗೊಳ್ಳಲಿವೆ.

ಕೆಪಿಎಸ್ ಶಾಲೆಗಳ ವಿವರ

ಹೊಸ 12 ಶಾಲೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 19 ಕೆಪಿಎಸ್ ಶಾಲೆಗಳು ಆದಂತೆ ಆಗಿವೆ. ರಾಮನಗರ ತಾಲೂಕಿನ ಅವ್ವೇರಹಳ್ಳಿ, ಮಾಯಗಾನಹಳ್ಳಿ, ಕೂನಗಲ್, ಹನುಮಂತನಗರ, ಚನ್ನಪಟ್ಟಣ ತಾಲೂಕಿನ ಅರಳಾಳಸಂದ್ರ, ಹೊಂಗನೂರು, ಚಕ್ಕೆರೆ, ಬ್ರಹ್ಮಣೀಪುರ, ಎಂ.ಎನ್.ಹೊಸಹಳ್ಳಿ, ಮಾಗಡಿ ತಾಲೂಕಿನ ಕುದೂರು, ತಿಪ್ಪಸಂದ್ರ, ಸಂಕಿಘಟ್ಟ, ಜಿಜೆಎಸ್ ಮಾಗಡಿ ಟೌನ್, ಜಿಜೆಎಸ್ ಬಿಡದಿ ಮತ್ತು ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ, ಹಾರೋಹಳ್ಳಿ, ಕೋಡಿಹಳ್ಳಿ, ಜಿಯುಎಚ್‌ಎಸ್ ಕನಕಪುರ ಟೌನ್, ಜಿಎಚ್‌ಪಿಎಸ್ ನಾಗರಸನಕೋಟೆ

ಏನೇನು ಲಭ್ಯ?

ಪ್ರತಿ ಶಾಲೆಗೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು, ಶಾಲಾ ಆವರಣಕ್ಕೆ ಅಗತ್ಯಕ್ಕೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸುವುದು, ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತದೆ.

ಕೆಪಿಎಸ್ ಶಾಲೆಯಲ್ಲಿ ಕನಿಷ್ಠ 1,200 ಮತ್ತು ಗರಿಷ್ಠ 1,800 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳುವುದೇ ಇದರ ಮುಖ್ಯ ಉದ್ದೇಶ. ಸ್ಥಳೀಯ ಭೌಗೋಳಿಕ ಪ್ರದೇಶ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲಿ ಅಗತ್ಯವಿರುವ ಕಡೆ ಹೆಚ್ಚು ಆದ್ಯತೆ ನೀಡಿರುವ ಕಾರಣ ರಾಮನಗರಕ್ಕೆ 5, ಚನ್ನಪಟ್ಟಣಕ್ಕೆ 3, ಕನಕಪುರಕ್ಕೆ 3 ಹಾಗೂ ಮಾಗಡಿಗೆ 3 ಶಾಲೆಗಳು ಮಂಜೂರು ಮಾಡಲಾಗಿದೆ. ಈಗಾಗಲೇ 500ರಿಂದ 600 ಮಕ್ಕಳು ಇರುವ ಕಡೆಯು ಕೆಪಿಎಸ್ ನೀಡಲಾಗಿದೆ. ಪೂರ್ವ ಪ್ರಾಥಮಿಕ ತರಗತಿಗಳಲ್ಲಿ 30ರಷ್ಟಿರುವ ದಾಖಲಾತಿ ಮಿತಿಯನ್ನು 40ಕ್ಕೆ ಹೆಚ್ಚಳ ಮಾಡುವುದರ ಜೊತೆಗೆ ಪ್ರಾಥಮಿಕ ತರಗತಿಗಳಲ್ಲಿ ಕೂಡ 30 ಮಕ್ಕಳ ಸಂಖ್ಯೆಯನ್ನು 50ಕ್ಕೆ ಹೆಚ್ಚಳ ಮಾಡುವ ಚಿಂತನೆಯಿದ್ದು, ಮೂಲ ಸೌಕರ್ಯ ಹಾಗೂ ಶಿಕ್ಷಕರ ಲಭ್ಯತೆಯನ್ನು ನೋಡಿ ಸಾಧ್ಯವಾದಲ್ಲಿ 60 ಮಕ್ಕಳವರೆಗೂ ಅನುಮತಿ ಸಿಗಲಿದೆ ಎಂಬುದು ಶಿಕ್ಷಣ ಇಲಾಖಾ ಅಧಿಕಾರಿಗಳ ಅನಿಸಿಕೆಯಾಗಿದೆ.

ಜಿಲ್ಲೆಗೆ 12 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿವೆ. ಇದರಿಂದ ಜಿಲ್ಲೆಯಲ್ಲಿ ಕೆಪಿಎಸ್ ಶಾಲೆಗಳ ಸಂಖ್ಯೆ 19ಕ್ಕೆ ಏರಿಕೆ ಆಗಿವೆ. ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಕೊಡಲು ಸರ್ಕಾರದ ನಿರ್‘ಾರ ಸೂಕ್ತವಾಗಿದೆ.ಸ್ವಾಮಿ, ಡಿಡಿಪಿಐ, ಬೆಂಗಳೂರು ದಕ್ಷಿಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net