12 ಲಕ್ಷ ರೂಪಾಯಿ ಬೆಲೆಯ ಸೈಕಲ್!

Cycle
Published on

ಮಂಗಳೂರು: ಒಂದು ಸೈಕಲ್ ಬೆಲೆ 12 ಲಕ್ಷ ರೂ. ಎಂದರೆ ನಂಬಲೇಬೇಕು. ಇದು ಮೈಸೂರಿನ ಟ್ರಯತ್ಲಾನ್ ಪಟುವೊಬ್ಬರಿಗಾಗಿ ನಗರದ ಮಳಿಗೆಯೊಂದು ತರಿಸಿರುವ ಸೈಕಲ್. ಕೆನಡಾ ಮೂಲದ ರೇಸಿಂಗ್ ಸೈಕಲ್​ಗಳ ಸರ್​ವೆಲ್ಲೊ ಕಂಪನಿಯ ಪಿಎಕ್ಸ್ ಸೀರೀಸ್​ನ ಡ್ಯೂರೇಸ್ ಡೈ2 2020 ಮಾದರಿಯನ್ನು ಸದ್ಯ ನಗರದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಸೈಕ್ಲಿಂಗ್-ಈಜು-ಓಟ ಈ ಮೂರರ ಟ್ರಯತ್ಲಾನ್ ಕ್ರೀಡೆಗಳಲ್ಲಿ ಅತೀ ವೇಗದ ಸೈಕ್ಲಿಂಗ್​ಗೆ ಇಂತಹ ಸೈಕಲ್ ಬಳಸಲಾಗುತ್ತದೆ. ಅತೀ ಹಗುರವಾದ ಮೋನೊಕಾಕ್ ಕಾರ್ಬನ್​ನಿಂದ ನಿರ್ವಣಗೊಂಡಿರುವ ಸೈಕಲ್ ಏರೋ ಬೇಸ್ ಬಾರ್, ಉತ್ಕೃಷ್ಟ ದರ್ಜೆಯ ಶಿಮಾನೊ ಡ್ಯೂರೇಸ್ ಡೈ2 ಡಿರೈಲ್ಯೂರ್​ಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net