114 ಜನರಿಗೆ ಪಾಸಿಟಿವ್, 90 ಜನ ಗುಣ

carona logo
Published on

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ 114 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 90 ಜನರು ಗುಣವಾಗಿದ್ದಾರೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ. ಈವರೆಗೆ 9,220 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 7713 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 172 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1335 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 617 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 298 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬ್ಯಾಡಗಿಯಲ್ಲಿ 25, ಹಾನಗಲ್ಲ 8, ಹಾವೇರಿ 26, ಹಿರೇಕೆರೂರ 18, ರಾಣೆಬೆನ್ನೂರ 36, ಶಿಗ್ಗಾಂವಿ 1 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾಗಿ ಭಾನುವಾರ ಬ್ಯಾಡಗಿಯಿಂದ 15, ಹಾನಗಲ್ಲ 4, ಹಿರೇಕೆರೂರ 12, ರಾಣೆಬೆನ್ನೂರ 22, ಸವಣೂರ 14, ಶಿಗ್ಗಾಂವಿ 23 ಜನರು ಬಿಡುಗಡೆ ಹೊಂದಿದ್ದಾರೆ. ಹಿರೇಕೆರೂರು ತಾಲೂಕಿನ ಬಾಳಂಬೀಡ ಗ್ರಾಮದ 74 ವರ್ಷದ ವೃದ್ಧ ಮೃತಪಟ್ಟಿದ್ದು, ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net