

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ವಲಸೆ ಮತ್ತು ಕಟ್ಟಡ ಕಾರ್ವಿುಕರು, ಕೂಲಿಕಾರರು, ಕೊಳೆಗೇರಿ ನಿವಾಸಿಗಳ ಆರೋಗ್ಯ ತಪಾಸಣೆಗಾಗಿ 11 ಸಂಚಾರಿ ತಪಾಸಣಾ ವಾಹನಗಳಿಗೆ (ಮೊಬೈಲ್ ಕ್ಲಿನಿಕ್) ಮೇಯರ್ ಗೌತಮ್ುಮಾರ್ ಸೋಮವಾರ ಚಾಲನೆ ನೀಡಿದರು.
ನಗರದಲ್ಲಿರುವ ಕಟ್ಟಡ ಕಾರ್ವಿು ಕರು ವಾಸಿಸುವ, ಕೊಳೆಗೇರಿ ಪ್ರದೇಶ, ಪೌರಕಾರ್ವಿುಕರ ಕಾಲನಿ ಗಳಲ್ಲಿ ತಪಾಸಣೆಗೆ ಭಾರತೀಯ ಜೈನ್ ಸಂಘಟನೆಯ ಸಹಯೋಗ ದಲ್ಲಿ 11 ಮೊಬೈಲ್ ಕ್ಲಿನಿಕ್ಗಳ ವ್ಯವಸ್ಥೆ ಮಾಡಲಾಗಿದೆ. ತಪಾಸಣೆಗೆ ಬಿಬಿಎಂಪಿ ವೈದ್ಯರ ತಂಡ ನಿಯೋಜಿಸಲಾಗಿದ್ದು, ಮೇ 3ರವರೆಗೆ ಈ ವಾಹನಗಳು ಉಚಿತವಾಗಿ ಸೇವೆ ನೀಡಲಿವೆ. ಈ ವೇಳೆ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುವರು ವೈದ್ಯಾಧಿಕಾರಿಗಳು: ಪ್ರತಿ ವಾಹನ ದಲ್ಲೂ ಮೂವರು ವೈದ್ಯರು (ಒಬ್ಬ ಮಾನಸಿಕ ತಜ್ಞ, ಇಬ್ಬರು ಬೆಂಗಳೂರು ಮೆಡಿಕಲ್ ಕಾಲೇಜು ಇಂಟರ್ನ್ ವೈದ್ಯರು) ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಆರಂಭಿಸ ಲಾಗಿರುವ ‘ಬಿಬಿಎಂಪಿ ಟೆಲಿಹೆಲ್ತ್ ಲೈನ್’ಗೆ (07447118949) ಸಹಾಯವಾಣಿ ಜತೆ ಸಂಚಾರಿ ತಪಾಸಣಾ ಸೇವೆ ಯನ್ನು ಲಿಂಕ್ ಮಾಡಿಕೊಂಡು ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ಉಪ ಮೇಯರ್ ರಾಮಮೋಹನರಾಜು, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಬಿ.ಕೆ. ವಿಜೇಂದ್ರ, ಡಾ. ನಿರ್ಮಲಾ ಬುಗ್ಗಿ, ಭಾರತೀಯ ಜೈನ್ ಸಂಘಟನೆ ಬೆಂಗಳೂರು ಅಧ್ಯಕ್ಷ ವಿನೋದ್ ಪೊರ್ವಾಲ್, ಉಪಾಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.