ಸದಸ್ಯರಿಗೆ ಶೇ.11 ಡಿವಿಡೆಂಡ್ : ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಚಂದ್ರಶೇಖರ ಸುವರ್ಣ ಘೋಷಣೆ

Mul_Cooperative
Published on

ಮೂಲ್ಕಿ: ಗ್ರಾಮೀಣ ವಲಯದ ಮೂರ್ತೆದಾರರನ್ನು ಸಂಘಟಿಸಿ ವ್ಯವಹಾರಿಕ ಉನ್ನತಿಯ ಸಹಿತ ಆರ್ಥಿಕ ಅಭಿವೃದ್ಧಿಯ ಧ್ಯೇಯದಿಂದ ಸ್ಥಾಪಿತವಾದ ಸಂಸ್ಥೆ ಈ ಬಾರಿ ತನ್ನ ಸದಸ್ಯರಿಗೆ ಶೇ.11 ಡಿವಿಡೆಂಡ್ ನೀಡುತ್ತಿದೆ ಎಂದು ಮೂಲ್ಕಿಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಸುವರ್ಣ ಹೇಳಿದರು.

ಮೂಲ್ಕಿಯಲ್ಲಿ ಗುರುವಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ವಲಯದಲ್ಲಿ ಮೂರ್ತೆದಾರಿಕೆಯನ್ನು ಕುಲಕಸುಬಾಗಿಸಿಕೊಂಡು ಕೃಷಿ ಹಾಗೂ ಹೈನುಗಾರಿಕೆಯ ಮೂಲಕ ಆರ್ಥಿಕ ಅಭಿವೃದ್ಧಿ ಕಂಡುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಮ್ಮ ಮೂರ್ತೆದಾರರು ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭ ಹಿರಿಯ ಮೂರ್ತೆದಾರ ಉಮೇಶ ಜಿ.ಸುವರ್ಣ ನಡಿಕೊಪ್ಪಲ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್ ಕುಬೆವೂರು ಆಯವ್ಯಯ, ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ರಮೇಶ್ ಜಿ.ಸುವರ್ಣ, ನಿರ್ದೇಶಕರಾದ ಯದೀಶ್ ಎಸ್.ಅಮೀನ್, ಕೆ.ರಾಘು ಸುವರ್ಣ, ಹರೀಂದ್ರ ಸುವರ್ಣ, ಸದಾನಂದ ಪೂಜಾರಿ, ಸುಧಾಕರ ಸುವರ್ಣ, ಸುನೀತಾ ಡಿ.ಮೂಲ್ಕಿ, ಗಣೇಶ್ ಕುಕ್ಯಾನ್, ಚರಿಷ್ಮಾ ಶ್ರೀನಿವಾಸ್, ಸದಸ್ಯರು, ಸಿಬ್ಬಂದಿ ಇದ್ದರು. ಚಂದ್ರಶೇಖರ ಸುವರ್ಣ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net