ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ 11 ಮಕ್ಕಳು ದಾಖಲು

ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ 11 ಮಕ್ಕಳು ದಾಖಲು
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಮೆಂದಾರೆ ಗ್ರಾಮದ ಗಿರಿಜನರ 11 ಮಕ್ಕಳು ಸೋಮವಾರ ಮಹದೇಶ್ವರ ಬೆಟ್ಟ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ ಪ್ರವೇಶ ಪಡೆದರು.

ಮೂಲ ಸೌಕರ್ಯದ ಸಲುವಾಗಿ ಏ.26 ರಂದು ಇಂಡಿಗನತ್ತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸಗೊಳಿಸಿದ್ದರು. ಈ ವೇಳೆ ಮೆಂದಾರೆ ಗ್ರಾಮದ ಗಿರಿಜನರು, ಅಧಿಕಾರಿ ಹಾಗೂ ಸಿಬ್ಬಂದಿಗಳು ಹಲ್ಲೆಗೊಳಗಾಗಿದ್ದರು. ಇದರಿಂದ ಭಯಭೀತರಾದ ಮೆಂದಾರೆ ಗ್ರಾಮಸ್ಥರು ಈವರೆಗೂ ಶಿಕ್ಷಣ ಪಡೆಯುತ್ತಿದ್ದ ಇಂಡಿಗನತ್ತ ಶಾಲೆಗೆ ಯಾವುದೇ ಕಾರಣಕ್ಕೂ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ತೀರ್ಮಾನಿಸಿದ್ದರು. ಇಂಡಿಗನತ್ತ ಶಾಲೆಯ ಶಿಕ್ಷಕ ರಾಘವೇಂದ್ರ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೋಲಿಸಿದರು ಸಾಧ್ಯವಾಗಿರಲಿಲ್ಲ. ಈ ವೇಳೆ ಗಿರಿಜನರು ಮಕ್ಕಳನ್ನು ಮಹದೇಶ್ವರ ಬೆಟ್ಟದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ ಸೇರಿಸುವುದಾಗಿ ಅಭಿಪ್ರಾಯ ತಿಳಿಸಿದ್ದರು.
ಗ್ರಾಮದಲ್ಲಿನ 13 ಮಕ್ಕಳ ಪೈಕಿ 11 ಮಕ್ಕಳನ್ನು ಪಾಲಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮ.ಬೆಟ್ಟದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ ದಾಖಲಿಸಿದರು. ಇದರಲ್ಲಿ 2ನೇ ತರಗತಿಗೆ ಹರ್ಷಿತ್‌ಕುಮಾರ್, 3ನೇ ತರಗತಿಗೆ ಗೌರಿ, ಕೃಷ್ಣ, ಮುತ್ತಯ್ಯ, 4ನೇ ತರಗತಿಗೆ ಗೌರಿ, ಮುದ್ದು ಮಾದೇಶ, ನಾಗಲಕ್ಷ್ಮೀ ಹಾಗೂ 6ನೇ ತರಗತಿಗೆ ಜ್ಯೋತಿ, ಮಾದೇವು, ಮಂಜು, ಪಾರ್ವತಿ ಪ್ರವೇಶ ಪಡೆದಿದ್ದು, ಇನ್ನುಳಿದ ಇಬ್ಬರು ಮಕ್ಕಳು ಬುಧವಾರ ಪ್ರವೇಶ ಪಡೆಯಲಿದ್ದಾರೆ. ಹಾಗೆಯೇ ಇಂಡಿಗನತ್ತ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಹ 6ನೇ ತರಗತಿಗೆ ಬುಡಕಟ್ಟು ಆಶ್ರಮ ಶಾಲೆಗೆ ಸೇರಿದ್ದಾರೆ.

ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಚೆಲುವರಾಜು, ಶಿಕ್ಷಕ ಗಣೇಶ್, ಮುಖಂಡ ಪಡಗಲ, ಲಕ್ಮೀ, ಮಾದಮ್ಮ, ಮಾದೇವಿ, ಮಂಗಮ್ಮ, ಸಣ್ಣಪುಟ್ಟಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net