10ನೇ ತರಗತಿ ಕಡ್ಡಾಯ ಕೈಬಿಡಿ

1010Klb03
Published on

ಕಲಬುರಗಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ೧೦ನೇ ತರಗತಿ ಕಡ್ಡಾಯ ಮಾಡಿದ್ದನ್ನು ಕೈಬಿಡುವಂತೆ ಆಗ್ರಹಿಸಿ ಸಮೃದ್ಧಿ ಕರ್ನಾಟಕ ಜನಪರ ಸಮಿತಿ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ಸುಭಾಷ ಬಿದನೂರ, ಗುರುಸ್ವಾಮಿ ಹಿರೇಮಠ, ಬಾಲಕೃಷ್ಣ ಪುಲೆ, ಕಲ್ಯಾಣಿ ತಳವಾರ, ಮೊಹ್ಮದ್ ನವಾಜ್, ರವಿ ಗೌಳಿ, ಶಶಿಕಾಂತ ಡೆಂಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net