10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Yoga day
Published on

ಬೆಂಗಳೂರು: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ವಿವಿಧ ಯೋಗ ಕೇಂದ್ರಗಳು, ಸಂಘ ಸಂಸ್ಥೆಗಳಿಂದ ಇಂದು (ಜೂ. 21) ನಗರದ ಹಲವೆಡೆ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆಯುಷ್ ಇಲಾಖೆಯು ವಿಧಾನಸೌಧದ ಆವರಣದಲ್ಲಿ ‘ಯೋಗೋತ್ಸವ’ ಹಮ್ಮಿಕೊಂಡಿದೆ. ಯೋಗ ಗಂಗೋತ್ರಿ ಟ್ರಸ್ಟ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಎಂ.ವಿ.ಎಂ. ನ್ಯಾಚುರೋಪತಿ ಮತ್ತು ಯೋಗ ಮಹಾವಿದ್ಯಾಲಯ, ಭಾಗೀರಥಿ ಕನ್ನಡತಿ ಸೇರಿ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳಿಂದ ಪ್ರಣವ ಓಂಕಾರ, ಶಾಂತಿ ಮಂತ್ರ, ಶ್ವಾಸಕ್ರಿಯೆ ನಡೆಯಲಿದೆ. ಕಲಾತ್ಮಕ ಯೋಗ, ಆಸನ ಪ್ರಾತ್ಯಕ್ಷಿಕೆ, ಭಾವಶುದ್ಧಿ ಧ್ಯಾನ, ಅಡ್ವಾನ್ಸ್ಡ್ ಆಸನ ಪ್ರಾತ್ಯಕ್ಷಿಕೆ, ಧೌತಿ ಕ್ರಿಯೆ ಮತ್ತು ಯೋಗಾಸನ, ಯೋಗ ಪರಿಮಿಡ್ ಮತ್ತು ರಿದಮಿಕ್ ಮಿರರ್ ಯೋಗ ಪ್ರದರ್ಶನ, ಶಿಷ್ಟಾಚಾರ ಯೋಗಕ್ಕೆ ತಯಾರಿ, ಸಾಮಾನ್ಯ ಯೋಗ ಶಿಷ್ಟಾಚಾರ ಸೇರಿ ವಿವಿಧ ಯೋಗಾಭ್ಯಾಸ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net