ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೇರಳ ಉಪ್ಪಳದ ಚಿಗುರುಪಾದೆಯ ಚಿನಾಲ, ಸಿ.ಎಂ.ನಗರದ ದಾರುನ್ನಜಾತ್ ಎಜುಕೇಶನಲ್ ಸೆಂಟರ್‌ನ 15ನೇ ವಾರ್ಷಿಕ, ಸನದುದಾನ ಸಮ್ಮೇಳನ ಮತ್ತು ಅಜ್ಮೀರ್ ಮೌಲಿದ್ ಜ.10, 11ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಎಸ್.ಎಂ.ಬಶೀರ್ ರಝ್ವಿ ತಿಳಿಸಿದರು.
ಜ.10ರಂದು ಸಯ್ಯಿದ್ ಶಂಸುದ್ದೀನ್ ತಂಳ್ ಗಾಂಧಿನಗರ ಧ್ವಜಾರೋಹಣ ನೆರವೇರಿಸಲಿದ್ದು, ಸಯ್ಯಿದ್ ಸಿಟಿಎಂ ಕುಂಞಿ ಕೋಯ ತಂಞಳ್ ರಝ್ವಿ ಉದ್ಘಾಟಿಸಲಿದ್ದಾರೆ. ಜಲಾಲಿಯ್ಯ ರಾತೀಬ್‌ನಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಳ್ ಮದಕ, ಮಹಮ್ಮದ್ ಮುಸ್ಲಿಯಾರ್ ಮಜ್ಸಿಸುದ್ದಾಕಿರೀನ್ ನೇತೃತ್ವದಲ್ಲಿ ಶಬೀರ್ ಅಶ್‌ಅರಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಸಯ್ಯಿದ್ ಅತಾವುಲ್ಲ ತಂಳ್ ಉದ್ಯಾವರ, ಕೇರಳ ಮುಸ್ಲಿಂ ಜವಾಅತ್ ಮಂಜೇಶ್ವರ ರೆನ್‌ನ ಅಧ್ಯಕ್ಷ ಹಮೀದ್ ಸಖಾಫಿ ಬಾಕಿವಾರ್ ಸ್ವಲಾತ್ ಮಜ್ಲಿಸ್ ನಡೆಸಿಕೊಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11ರಂದು ಸವಾರೋಪ ಸವಾರಂಭದಲ್ಲಿ ಮಡವೂರ್ ಮೌಲಿದ್, ಅಜ್ಮೀರ್ ಮೌಲಿದ್, ರಝ್ವಿ ಸಂಗಮ ನಡೆಯಲಿದೆ. ಸಂಜೆ 5ಕ್ಕೆ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸೇರಿದಂತೆ ಎಲ್ಲ ಧರ್ಮಗಳ ಧಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದರು.
ದಾರುನ್ನಜಾತ್ ಅಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ, ಪ್ರಬಂಧಕ ಶಬೀರ್ ಅಶ್‌ಅರಿ, ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಎಂ.ಕೆ.ಕಂಚಿಲ, ಕೋಶಾಧಿಕಾರಿ ಮುಸ್ತಾಫ ಕಡಂಬಾರ್, ಜವಾಅತ್ ಅಧ್ಯಕ್ಷ ಹುಸೈನ್ ಮುಸ್ಲಿಯಾರ್, ಪ್ರಚಾರ ಸಮಿತಿಯ ಸಂಚಾಲಕ ಹುಸೈನ್ ರಝ್ವಿ, ಕರ್ನಾಟಕ ಪ್ರಚಾರ ಸಮಿತಿ ಸಂಚಾಲಕ ಅಬ್ಬಾಸ್ ರಝ್ವಿ ಸುದ್ದಿಗೋಷ್ಠಿಯಲ್ಲಿದ್ದರು.