

ಕಾರವಾರ: ಜಿಲ್ಲೆಯಲ್ಲಿ ಗುರುವಾರ 108 ಜನರಲ್ಲಿ ಕರೊನಾ ಕಾಣಿಸಿಕೊಂಡಿದ್ದು, 115 ಜನ ಗುಣ ಹೊಂದಿದ್ದಾರೆ. ಒಂದೇ ದಿನ ನಾಲ್ವರು ಸಾವನ್ನಪ್ಪಿದ್ದಾರೆ.
ಕಾರವಾರದಲ್ಲಿ 18, ಅಂಕೋಲಾದಲ್ಲಿ 1, ಕುಮಟಾದಲ್ಲಿ 15, ಹೊನ್ನಾವರದಲ್ಲಿ 16, ಭಟ್ಕಳದಲ್ಲಿ 9, ಶಿರಸಿಯಲ್ಲಿ7, ಯಲ್ಲಾಪುರದಲ್ಲಿ ಹಾಗೂ ಮುಂಡಗೋಡಿನಲ್ಲಿ ತಲಾ 6, ಹಳಿಯಾಳ ಮತ್ತು ದಾಂಡೇಲಿಯಲ್ಲಿ 26, ಜೊಯಿಡಾದಲ್ಲಿ 4 ಜನರಲ್ಲಿ ಕೋವಿಡ್ ಇರುವುದು ಖಚಿತವಾಗಿದೆ. ಕಾರವಾರದಲ್ಲಿ 12, ಅಂಕೋಲಾದಲ್ಲಿ 26, ಹೊನ್ನಾವರದಲ್ಲಿ 12, ಭಟ್ಕಳದಲ್ಲಿ 11, ಶಿರಸಿಯಲ್ಲಿ 19, ಸಿದ್ದಾಪುರದಲ್ಲಿ 2, ದಾಂಡೇಲಿ ಹಾಗೂ ಹಳಿಯಾಳದಲ್ಲಿ 27, ಜೊಯಿಡಾದಲ್ಲಿ 6 ಜನ ಗುಣಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 3687 ಕ್ಕೆ ಏರಿಕೆಯಾಗಿದ್ದು, 2781 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. 868 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 39 ಸಾವು ಸಂಭವಿಸಿದೆ.
ನಾಲ್ವರು ಸಾವು: ಮಧುಮೇಹ ಹಾಗೂ ರಕ್ತದೊತ್ತಡ ಇದ್ದ ಕರೊನಾ ಕೂಡ ಖಚಿತವಾಗಿ ಆ.15 ರಂದು ಕ್ರಿಮ್ಸ್ಗೆ ದಾಖಲಾಗಿದ್ದ 62 ವರ್ಷದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗಿನಜಾವ ಮೃತಪಟ್ಟಿದ್ದಾರೆ. ಹೊನ್ನಾವರದಲ್ಲಿ ಮೃತಪಟ್ಟ ಇಬ್ಬರಲ್ಲಿ ಹಾಗೂ ಶಿರಸಿಯಲ್ಲಿ ಮೃತಪಟ್ಟ ಒಬ್ಬ ವ್ಯಕ್ತಿಯಲ್ಲಿ ಕರೊನಾ ಇರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಸಂಭವಿಸಿದ ಅತಿ ಹೆಚ್ಚಿನ ಸಾವು ಇದಾಗಿದೆ.