108 ಆಂಬುಲೆನ್ಸ್​ನಲ್ಲೇ ಹೆರಿಗೆ

13SIRSI3
Published on

ಶಿರಸಿ: ಗರ್ಭಿಣಿಯೊಬ್ಬರು 108 ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ವಾಹನದಲ್ಲೇ ಹೆರಿಗೆಯಾದ ಘಟನೆ ತಾಲೂಕಿನ ಬುಗುಡಿಕೊಪ್ಪದ ಬಳಿ ಗುರುವಾರ ನಡೆದಿದೆ.

ಸಂತೊಳ್ಳಿ ಗ್ರಾಮದ ಚೈತ್ರಾ ರಾಘವೇಂದ್ರ ಕಾಸಂಬಿ (23) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಂಬುಲೆನ್ಸ್​ನಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ ಯೋಗೇಶ ಎಂ.ಕೆ. ಅವರು ಆಶಾ ಕಾರ್ಯಕರ್ತೆ ಗೀತಾ ವಿಜಯಕುಮಾರ ತಂಬೂಳಿ ಅವರ ಸಹಾಯದಿಂದ ಹೆರಿಗೆ ಮಾಡಿಸಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೈತ್ರಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರ ಕುಟುಂಬದವರು 108 ಆಂಬುಲೆನ್ಸ್​ಗೆ ಕರೆ ಮಾಡಿದ್ದರು. ಕೂಡಲೆ ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್ ಸಿಬ್ಬಂದಿ, ಚೈತ್ರಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಬುಗುಡಿಕೊಪ್ಪದ ಬಳಿ ತಲುಪಿದಾಗ ಹೆರಿಗೆ ನೋವು ಹೆಚ್ಚಾಯಿತು. ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಹೆರಿಗೆ ಮಾಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net