108 ಆಂಬುಲೆನ್ಸ್​ನಲ್ಲಿ ಹೆರಿಗೆ

26mnd1
Published on

ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಗ್ರಾಮದ ಮಹಿಳೆಗೆ 108 ಆಂಬುಲೆನ್ಸ್ ನಲ್ಲಿ ಬುಧವಾರ ಸಂಜೆ ಹೆರಿಗೆಯಾಗಿದೆ.

ಗಂಗುಬಾಯಿ ಬಾಗು ಜೋರೆ ಎಂಬುವವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಗ್ರಾಮದಿಂದ ತಾಲೂಕು ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಕರೆ ತರುತ್ತಿದ್ದಾಗ ಮಾರ್ಗ ಮಧ್ಯೆ ಟಿಬೆಟಿಯನ್ ಕಾಲನಿ ಹತ್ತಿರ ಮಹಿಳೆಗೆ ತುಂಬಾ ನೋವು ಕಾಣಿಸಿಕೊಂಡಿತು. ತಕ್ಷಣ ಆಂಬುಲೆನ್ಸ್ ಅನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ವಾಹನದಲ್ಲಿದ್ದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ., ಆಶಾ ಕಾರ್ಯಕರ್ತೆ ಸವಿತಾ ಜನ್ನು ಮತ್ತು ಚಾಲಕ ಭೀಮಪ್ಪ ಬಿ. ಇವರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net