

ಹೆಬ್ರಿ: ಶಿವಪುರ ಶ್ರೀ ಶಂಕರದೇವ ದೇವಸ್ಥಾನದಲ್ಲಿ ನಡೆದ ಶಿವರಾತ್ರಿ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದರು. ಶಿವಪುರ ವಿಪ್ರ ಯುವ ವೃಂದದಿಂದ 108 ಸೀಯಾಳಾಭಿಷೇಕ, ರುದ್ರಾಭಿಷೇಕ, ಭಜನಾ ಮಂಡಳಿಗಳಿಂದ ಭಜನೆ, ಮಹಾಪೂಜೆ ನೆರವೇರಿದವು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್, ಸದಸ್ಯರು, ಅರ್ಚಕರು ಇದ್ದರು.