ಕಾಡುಹೊಳೆಯಲ್ಲಿ ಅಹೋರಾತ್ರಿ ಭಜನೋತ್ಸವ

kaduhole
ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ವಿವಿಧ ಸೇವೆ, ಪೂಜಾ ಕಾರ್ಯಕ್ರಮ ನೆರವೇರಿದವು.
Published on

ಹೆಬ್ರಿ: ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಪ್ರಾರ್ಥನೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಪಾರಾಯಣ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿದವು. ತೆಳ್ಳಾರು ಕಾರ್ಕಳ ಸಿದ್ದಿವಿನಾಯಕ ಭಜನಾ ಮಂಡಳಿಂದ ಭಜನೆ ನಡೆಯಿತು. ರಾತ್ರಿ ರಂಗಪೂಜೆ, ಮಹಾಪೂಜೆ, ಅಹೋರಾತ್ರಿ ಭಜನೆ ನಡೆಯಿತು. ಪ್ರಧಾನ ಅರ್ಚಕ ಗುಡ್ಡೆಅಂಗಡಿ ರಾಘವೇಂದ್ರ ಭಟ್, ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ, ಮಹಾಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net